ಜೆರುಸಲೇಂ(ಜೂ.16): ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಪತ್ನಿ ಸಾರಾ ನೇತನ್ಯಾಹು ವಿರುದ್ಧ ಸರ್ಕಾರಿ ಹಣ ದುರ್ಬಳಕೆ ಮಾಡಿರುವ ಆರೋಪ ಸಾಬೀತಾಗಿದೆ. ವಿಚಾರಣೆ ಬಳಿಕ ನ್ಯಾಯಾಲಯ ಸಾರಾ ಅವರಿಗೆ 15 ಸಾವಿರ ಡಾಲರ್ ದಂಡ ವಿಧಿಸಿದೆ.

ಐಷಾರಾಮಿ ಭೋಜನಕ್ಕಾಗಿ ಸುಮಾರು 10 ಸಾವಿರ ಡಾಲರ್ ಸಾರ್ವಜನಿಕ ಹಣ ಬಳಸಿದ ಆರೋಪ ಸಾರಾ ವಿರುದ್ಧ ಕೇಳಿ ಬಂದಿತ್ತು. ಈ ಕುರಿತು ವಿಚಾರಣೆ ನಡೆಸಿದ ಜೆರುಸಲೇಮ್ ಮ್ಯಾಜಿಸ್ಟ್ರೇಟ್ ಕೋರ್ಟ್, 15 ಸಾವಿರ ಡಾಲರ್ ದಂಡ ವಿಧಿಸಿ ತೀರ್ಪು ನೀಡಿದೆ.

ಸಾರಾ ವಿರುದ್ಧ ಪ್ರಧಾನಿ ಅಧಿಕೃತ ನಿವಾಸದಲ್ಲಿ ಪೂರ್ಣಾವಧಿ ಬಾಣಸಿಗರನ್ನು ನೇಮಿಸಿಕೊಂಡಿದ್ದರೂ, ಐಷಾರಾಮಿ ರೆಸ್ಟೋರೆಂಟ್ ನಲ್ಲಿ ದುಂದುವೆಚ್ಚ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.