ನವದೆಹಲಿ(ಆ.04): ಇಂದು ವಿಶ್ವ ಸ್ನೇಹಿತರ ದಿನಾಚರಣೆ. ಅದರಂತೆ ಎಲ್ಲರೂ ತಮ್ಮ ಜೀವದ ಗೆಳಯ(ತಿ)ನಿಗೆ ಫ್ರೆಂಡ್’ಶಿಪ್ ಡೇ ಸಂದೇಶ ರವಾನಿಸುವಲ್ಲಿ ಬ್ಯುಸಿ.

ಅದರಂತೆ ಪ್ರಧಾನಿ ಮೋದಿ ಅವರಿಗೂ ಕೂಡ ಫ್ರೆಂಡ್’ಶಿಪ್ ಡೇ ನಿಮಿತ್ತ ವಿಶೇಷ ಗೆಳೇಯನ ವಿಶೇಷ ಸಂದೇಶವೊಂದು ಬಂದಿದೆ. 
  
ಇಸ್ರೇಲ್ ಪ್ರಧಾನಿ ಬೆಂಜಮೆನ್ ನೇತನ್ಯಾಹು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಸ್ನೇಹಿತರ ದಿನಾಚರಣೆಯ ವಿಶ್ ಮಾಡಿದ್ದಾರೆ.

ವಿಶ್ವ ಸ್ನೇಹ ದಿನಾಚರಣೆ ಹಿನ್ನೆಲೆಯಲ್ಲಿ ನೇತನ್ಯಾಹು ಪ್ರಧಾನಿಗೆ ಶುಭ ಕೋರಿದ್ದು, ಬಾಲಿವುಡ್’ನ ಶೋಲೆ ಚಿತ್ರದ ಪ್ರಸಿದ್ಧ ಯೇ ದೋಸ್ತಿ ಹಮ್ ನಹೀ ಚೋಡೆಂಗೆ.. ಹಾಡಿನ ಸಾಲನ್ನು ಬರೆದಿದ್ದಾರೆ.

ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಈ ಶುಭಾಶಯದ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದು, ಭಾರತ ಮತ್ತು ಇಸ್ರೇಲ್ ಸ್ನೇಹ ಮತ್ತಷ್ಟು ಬಲಗೊಳ್ಳಲಿ ಎಂದು ಹೇಳಿದೆ.