ಇಸ್ಕಾನ್ ತಯಾರಿಸುವ ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಪದಾರ್ಥಗಳ ಬಳಕೆ ಮಾಡುವುದಿಲ್ಲ. ಆದರೆ ಕ್ಯಾಂಟೀನ್‌ನ ಆಹಾರದಲ್ಲಿ ಇವನ್ನು ಬಳಸಬೇಕೆಂದು ಸರ್ಕಾರ ತಿಳಿಸಿದೆ. ಆದರೆ ಆಹಾರ ತಯಾರಿಕೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಗಳನ್ನು ಬಳಸಲು ಇಸ್ಕಾನ್ ನಿರಾಕರಿಸಿದೆ ಎನ್ನಲಾಗಿದೆ.

ಬೆಂಗಳೂರು (ಮಾ.30): ರಾಜ್ಯ ಸರ್ಕಾರ ಬಜೆಟ್‌'ನಲ್ಲಿ ಘೋಷಿಸಿರುವಂತೆ ಏಪ್ರಿಲ್ 1ರಿಂದ ಬೆಂಗಳೂರಿನ 198 ವಾರ್ಡ್‌ಗಳಲ್ಲಿ ನಮ್ಮ ಕ್ಯಾಂಟೀನ್ ಆರಂಭಿಸಲು ಸಿದ್ಧತೆ ನಡೆಸಿದೆ. ಆದರೆ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಈರುಳ್ಳಿ, ಬೆಳ್ಳುಳ್ಳಿ ಅಡ್ಡಗಾಲು ಹಾಕಿವೆ.

ಇಸ್ಕಾನ್ ಹಾಗೂ ಇತರೆ ಎರಡು ಸಂಸ್ಥೆಗಳು ಕ್ಯಾಂಟೀನ್‌ಗಳನ್ನು ನಡೆಸಲು ಮುಂದೆ ಬಂದಿದ್ದು, ಸ್ವಚ್ಛತೆ, ಗುಣಮಟ್ಟದ ದೃಷ್ಟಿಯಿಂದ ಇಸ್ಕಾನ್ ಬಗ್ಗೆ ಸರ್ಕಾರ ಹೆಚ್ಚು ಆಸಕ್ತವಾಗಿದೆ ಎನ್ನಲಾಗಿತ್ತು.

ಆದರೆ ಇಸ್ಕಾನ್ ತಯಾರಿಸುವ ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಪದಾರ್ಥಗಳ ಬಳಕೆ ಮಾಡುವುದಿಲ್ಲ. ಆದರೆ ಕ್ಯಾಂಟೀನ್‌ನ ಆಹಾರದಲ್ಲಿ ಇವನ್ನು ಬಳಸಬೇಕೆಂದು ಸರ್ಕಾರ ತಿಳಿಸಿದೆ. ಆದರೆ ಆಹಾರ ತಯಾರಿಕೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಗಳನ್ನು ಬಳಸಲು ಇಸ್ಕಾನ್ ನಿರಾಕರಿಸಿದೆ ಎನ್ನಲಾಗಿದೆ.

ಆದುದರಿಂದ ಇಸ್ಕಾನ್ ಜೊತೆಗಿನ ಒಪ್ಪಂದಕ್ಕೆ ಆರಂಭದಲ್ಲೇ ಬ್ರೇಕ್ ಬಿದ್ದಾಂತಾಗಿದೆ. ಇಸ್ಕಾನ್ ಜೊತೆ ಸರ್ಕಾರ ಒಪ್ಪಂದ ಮಾಡಿಕೊಳ್ಳುತ್ತಿಲ್ಲವೆಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಬೆಂಗಳೂರಿನ 198 ವಾರ್ಡ್'ಗಳಲ್ಲಿ ಇಂದಿರಾ ಕ್ಯಾಂಟೀನ್'ಗಳಿಗೆ ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.