ಐಸಿಸ್ ಅಟ್ಟಹಾಸಕ್ಕೆ ಇಡೀ ಜಗತ್ತೇ ನಲುಗಿ ಹೋಗಿದೆ. ತನ್ನ ಕ್ರೌರ್ಯ ಕೃತ್ಯದಿಂದ ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತ ಘಟನೆಗಳಿಗೆ ಈ ಇಸ್ಲಾಮಿಕ್ ಸಂಘಟನೆ ಕಾರಣವಾಗಿದೆ.ಅಂತರ್ಜಾಲ ತಾಣಗಳ ಮೂಲಕವೂ ಜಗತ್ತಿನಾದ್ಯಂತ ತನ್ನ ಕಬಂದ ಬಾಹುಗಳನ್ನು ಚಾಚುತ್ತಿರುವ ಐಸಿಸ್’ನ  ಕರಿನೆರಳು ಇತ್ತೀಚೆಗೆ ಭಾರತದಲ್ಲೂ ಆವರಿಸಿದೆ . ಬಡ ಯುವಕರನ್ನು ಧರ್ಮದ ಹೆಸರಲ್ಲಿ ಹೋರಾಡುವಂತೆ ಹುರಿದುಂಬಿಸುತ್ತಿದೆ.

ನವದೆಹಲಿ (ಮೇ.17): ಐಸಿಸ್ ಅಟ್ಟಹಾಸಕ್ಕೆ ಇಡೀ ಜಗತ್ತೇ ನಲುಗಿ ಹೋಗಿದೆ. ತನ್ನ ಕ್ರೌರ್ಯ ಕೃತ್ಯದಿಂದ ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತ ಘಟನೆಗಳಿಗೆ ಈ ಇಸ್ಲಾಮಿಕ್ ಸಂಘಟನೆ ಕಾರಣವಾಗಿದೆ.ಅಂತರ್ಜಾಲ ತಾಣಗಳ ಮೂಲಕವೂ ಜಗತ್ತಿನಾದ್ಯಂತ ತನ್ನ ಕಬಂದ ಬಾಹುಗಳನ್ನು ಚಾಚುತ್ತಿರುವ ಐಸಿಸ್’ನ ಕರಿನೆರಳು ಇತ್ತೀಚೆಗೆ ಭಾರತದಲ್ಲೂ ಆವರಿಸಿದೆ . ಬಡ ಯುವಕರನ್ನು ಧರ್ಮದ ಹೆಸರಲ್ಲಿ ಹೋರಾಡುವಂತೆ ಹುರಿದುಂಬಿಸುತ್ತಿದೆ.

ಇಡೀ ವಿಶ್ವಕ್ಕೆ ತಲೆ ನೋವಾಗಿರುವ ರಕ್ಕಸ ಐಸಿಸ್​ ಉಗ್ರರ ಬೇರು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. 2002ರಲ್ಲಿ ಶುರುವಾದ ಈ ಸಂಘಟನೆ ಇಸ್ಲಾಮಿಕ್​ ಸ್ಟೇಟ್​ ಸ್ಥಾಪಿಸುವ ಗುರಿ ಹೊಂದಿದೆ. ಇದಕ್ಕಾಗಿ ಜಗತ್ತಿನ ವಿವಿಧ ದೇಶಗಳಿಂದ ಯುವಕರನ್ನು ತನ್ನ ಸಂಘಟನೆಯತ್ತ ಸೆಳೆಯುತ್ತಿದೆ. ಇರಾಕ್ ಮತ್ತು ಸಿರಿಯಾ ರಾಷ್ಟ್ರಗಳಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿಕೊಂಡಿರುವ ಐಸಿಸ್​ ಉಗ್ರರು ಹಣದ ಆಮಿಷವೊಡ್ಡಿ ಯವಕರನ್ನು ಬಲಿ ಪಡೆಯುತ್ತಿದೆ .

ಭಾರತೀಯರೇ ಟಾರ್ಗೆಟ್​

ಇನ್ನು 2016ರಲ್ಲಿ ಮೊದಲ ಬಾರಿಗೆ ಭಾರತೀಯ ವಿದ್ಯಾವಂತ ಯುವಕರನ್ನು ಟಾರ್ಗೆಟ್​ ಮಾಡಿದ್ದ ಐಸಿಸ್​ ಉಗ್ರರು ತನ್ನತ್ತ ಸೆಳೆಯಲು ಯತ್ನಿಸಿದ್ದರು. ಬಂದರು ಪ್ರದೇಶಗಳ ಮೂಲಕ ಇರಾಕ್ ಗೆ ಬರುವಂತೆ ಐಸಿಸ್​ ಉಗ್ರರು ಸೂಚಿಸಿದ್ದರು . ಅದರಂತೆ ಸುಮಾರು 50ಕ್ಕೂ ಹೆಚ್ಚು ಯುವಕರು ಐಸಿಸ್​ ಸೇರಲು ಭಾರತಬಿಟ್ಟು ತೆರಳಲು ಮುಂದಾಗಿದ್ದರು . ಹೀಗೆ ಮನೆ ಬಿಟ್ಟು ಬಂದಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ. ಅದರಲ್ಲಿ ಪ್ರಮುಖವಾಗಿ ಮಹಾರಾಷ್ಟ್ರ ಮತ್ತು ತೆಲಂಗಾಣದ 11 ಮಂದಿ ಕರ್ನಾಟಕದ 7 ಜನ , ಕೇರಳದ 6 ಮಂದಿ , ಉತ್ತರ ಪ್ರದೇಶದ 4 ನಾಲ್ವರನ್ನು ಅರೆಸ್ಟ್​ ಮಾಡಲಾಗಿದೆ. ಉಳಿದಂತೆ ಯುಪಿ , ಪಶ್ಚಿಮಾ ಬಂಗಳ ಹಾಗೂ ದೆಹಲಿಯ ಯುವಕರನ್ನು ಬಂಧಿಸಿದ್ದು ಒಟ್ಟಾರೆ ಇದೂವರೆಗೆ 68 ಜನರ ಬಂಧನವಾಗಿದೆ ಎಂದು ತಿಳಿದು ಬಂದಿದೆ.

ಐಸಿಸ್​ ಕಪಿ ಮುಷ್ಠಿಯಲ್ಲಿದ್ದ ಕನ್ನಡಿಗರು

ಇನ್ನು 2015 ಜುಲೈ 31 ರಂದು ಲಿಬಿಯಾದ ಐಸಿಸ್‌ ಉಗ್ರರಿಂದ ಕರ್ನಾಟಕದ ಇಬ್ಬರು ಪ್ರೊಫೆಸರ್​ಗಳು ಸೇರಿ ನಾಲ್ವರು ಭಾರತೀಯರನ್ನು ಉಗ್ರರು ಅಪಹರಸಿದ್ದರು. ಕೋಲಾರ ಜಿಲ್ಲೆಯ ವಿಜಯ್‌ ಕುಮಾರ್‌ ಮತ್ತು ರಾಯಚೂರಿನ ಲಕ್ಷ್ಮೀಕಾಂತ್‌ರನ್ನು ಕಿಡ್ನಾಪ್​ ಮಾಡಿದ್ದ ಉಗ್ರರ ಬಳಿ ಈ ಇಬ್ಬರು ಕನ್ನಡಿಗರು ನಾವು ನಿಮ್ಮ ಮಕ್ಕಳಿಗೆ ಪಾಠ ಹೇಳುವ ಮೇಷ್ಟ್ರು ಎಂದು ಮನವಿ ಮಾಡಿಕೊಂಡಾಗ ಬಿಡುಗಡೆಗೊಳಿಸಿದ್ದರು. ಇನ್ನು ಯೆಮೆನ್ ನಲ್ಲಿ ಐಸಿಸ್​ ಉಗ್ರರು ಬೆಂಗಳೂರಿನ ಫಾದರ್ ಟಾಮ್ ಉಳುನ್ನಲಿಲ್ ರನ್ನು ಅಪಹರಿಸಿ ಶಿರಚ್ಛೇದ ಮಾಡಿದರು ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಇಲ್ಲ.

ಇದಲ್ಲದೆ ಕಳೆದ ತಿಂಗಳು ಇರಾಕ್​ನಲ್ಲಿ ಐಸಿಸ್​ ಉಗ್ರರ ವಶದಲ್ಲಿದ್ದ 30ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿ ಮತ್ತೆ ತಾಯ್ನಾಡಿಗೆ ಕಳುಹಿಸಲಾಗಿದೆ. ಅಲ್ಲದೆ ವಿಶ್ವದ ವಿವಿದೆಡೆ ನಡೆದ ಐಸಿಸ್​ ದಾಳಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಭಾರತೀಯರು ಅಸುನೀಗಿದ್ದಾರೆ ಅಂತಾ ಹೇಳಲಾಗಿದೆ. ಒಟ್ಟಾರೆ ಐಸಿಸ್​ ಉಗ್ರರ ಉಪಟಳಕ್ಕೆ ಭಾರತೀಯರು ಬಲಿಯಾಗುತ್ತಿದ್ದಾರೆ.

ಆದ್ರೂ ಇವರ ಆಸಕ್ತಿ ಭಾರತೀಯ ಯುವಕರ ಮೇಲೆಯೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ರಿಪಬ್ಲಿಕ್​ ಟಿವಿಯ ಕರ್ನಾಟಕ ಮೂಲದ ವರದಿಗಾರ್ತಿ ಪ್ರೇಮಾ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಐಸಿಸ್​ ಬಗ್ಗೆ ಆಸಕ್ತಿ ಹೊಂದಿರುವ ಯುವಕರು ಇದ್ದಾರೆ.