ಕರ್ನಾಟಕಕ್ಕೂ ಐಸಿಸ್ ಸಂಘಟನೆಗೂ ನಂಟಿದೆಯಾ. ಇಂಥದ್ದೊಂದು ಅನುಮಾನ ಕಾಡುತ್ತಲೇ ಇದೆ. ಈ ಅನುಮಾನಕ್ಕೆ ಕೇರಳದ ಕಣ್ಣೂರು ಪೊಲೀಸರು ಉತ್ತರ ನೀಡಿದ್ದಾರೆ.

ಮಡಿಕೇರಿ(ಅ.30): ಕರ್ನಾಟಕಕ್ಕೂ ಐಸಿಸ್ ಸಂಘಟನೆಗೂ ನಂಟಿದೆಯಾ. ಇಂಥದ್ದೊಂದು ಅನುಮಾನ ಕಾಡುತ್ತಲೇ ಇದೆ. ಈ ಅನುಮಾನಕ್ಕೆ ಕೇರಳದ ಕಣ್ಣೂರು ಪೊಲೀಸರು ಉತ್ತರ ನೀಡಿದ್ದಾರೆ.

ಮೂರು ದಿನಗಳ ಹಿಂದೆ ಕೇರಳದ ಕಣ್ಣೂರಿನಲ್ಲಿ ಐಸಿಸ್​ ಬೆಂಬಲಿತ ಮೂವರನ್ನು ಬಂಧಿಸಲಾಗಿದೆ. ವಿ. ಕೆ. ಹಂಸ, ಮನಾಫ್ ಮತ್ತು ​ ರೆಹಮಾನ್​ ಬಂಧಿತರು. ಕಣ್ಣೂರು ಜಿಲ್ಲೆಯ ಡಿವೈಎಸ್ಪಿ ಸದಾನಂದನ್ ನೇತೃತ್ವದ ತಂಡ ಇವರನ್ನು ವಿಚಾರಣೆಗೊಳಪಡಿಸಿದಾಗ ಸಿಕ್ಕಿದ್ದು ಬೆಚ್ಚಿ ಬೀಳಿಸುವ ಮಾಹಿತಿ. ಕೊಡಗಿಗೂ ಐಸಿಸ್ ತನ್ನ ಕಾರ್ಯ ಚಟುವಟಿಕೆ ವಿಸ್ತರಿಸುತ್ತಿದೆ ಅನ್ನೋ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಾಮಾಜಿಕ ಜಾಲ ತಾಣಗಳ ಮೂಲಕ ಕಾರ್ಯ ನಿರ್ವಹಿಸುತ್ತಿರೋದಾಗಿಯೂ ಬಾಯ್ಬಿಟ್ಟಿದ್ದಾರೆ.

6 ತಿಂಗಳ ಹಿಂದೆ ಮಂಗಳೂರಿನಿಂದ ಸಿರಿಯಾಗೆ ಪ್ರಯಾಣ ಬೆಳೆಸಲು ಮುಂದಾಗಿದ್ದ ಮನಾಫ್ ಗೆ ಎನ್ಐಎ ತಂಡವು ಎಚ್ಚರಿಕೆ ನೀಡಿ ವಾಪಾಸ್ಸು ಕಳುಹಿಸಿತ್ತು. ಬಳಿಕ ಆತನ ಮೇಲೆ ನಿಗಾ ಇಟ್ಟಿದ್ದ ತಂಡ ಇಬ್ಬರೂ ವ್ಯಕ್ತಿಗಳು ಐಸಿಸ್ ವಕ್ತಾರನೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸಂಘಟನೆಗೆ ಹೆಚ್ಚು ಮಂದಿಯನ್ನು ಕಳುಹಿಸುವ ಉದ್ದೇಶ ಹೊಂದಿದ್ದ ವಿ.ಕೆ ಹಂಸ ಹಾಗೂ ಮನಾಫ್ ರೆಹಮಾನ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಅಂಶ ಬಯಲಾಗಿದೆ.

ಇನ್ನು ಈ ಬಗ್ಗೆ ಕೊಡಗು ಜಿಲ್ಲಾ ಹಿಂದೂಪರ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದು, ತಕ್ಷಣವೇ ಈ ಬಗ್ಗೆ ಕೊಡಗು ಜಿಲ್ಲೆಯಲ್ಲಿಯೂ ಎನ್ಐಎ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.