ಬ್ರಿಟನ್ ಸಂಸತ್ ಬಳಿ ನಿನ್ನೆ ನಡೆದ ಬಾಂಬ್ ದಾಳಿಗೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ.
ಲಂಡನ್ (ಮಾ.23): ಬ್ರಿಟನ್ ಸಂಸತ್ ಬಳಿ ನಿನ್ನೆ ನಡೆದ ಬಾಂಬ್ ದಾಳಿಗೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ.
ನಾವು ಭಯಗೊಂಡಿಲ್ಲ. ನಮ್ಮ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನವನ್ನು ಭಯೋತ್ಪಾದನೆ ಮಾಡುತ್ತಿದೆ. ಆದರೆ ಇಂದು ಜನಜೀವನ ಎಂದಿನಂತೆ ಮರಳಿದೆ ಎಂದು ಪ್ರಧಾನ ಮಂತ್ರಿ ಥೆರೆಸಾ ಮೇ ಹೇಳಿದ್ದಾರೆ.
ದಾಳಿಕೋರ ಒಬ್ಬನೇ ಇದ್ದು ಅವನು ಯಾವುದೇ ಗುಂಪಿಗೆ ಸೇರಿಲ್ಲವೆಂದು ನಂಬಲಾಗುತ್ತಿದೆ. ಹಾಗಾಗಿ ಮತ್ತೊಮ್ಮೆ ಇಂತಹ ಸಾರ್ವಜನಿಕ ದಾಳಿ ನಡೆಯುವುದಿಲ್ಲವೆಂದು ಥೆರೆಸಾ ಮೇ ಹೇಳಿದ್ದಾರೆ.
ನಿನ್ನೆ ನಡೆದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
