ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ಸಚಿವೆ ಹರ್ಸಿಮ್ ರಾತ್ ಕೌರ್ ವಾಗ್ದಾಳಿ ನಡೆಸಿದ್ದಾರೆ. ಆಪ್ ಚಟುವಟಿಕೆಗಳನ್ನು ನೋಡಿದರೆ ಪಾಕ್ ಐಎಸ್ ಐ ಆಪ್ ಪಕ್ಷವನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಲಂಬಿ/ಪಂಜಾಬ್ (ಫೆ.04): ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ಸಚಿವೆ ಹರ್ಸಿಮ್ ರಾತ್ ಕೌರ್ ವಾಗ್ದಾಳಿ ನಡೆಸಿದ್ದಾರೆ. ಆಪ್ ಚಟುವಟಿಕೆಗಳನ್ನು ನೋಡಿದರೆ ಪಾಕ್ ಐಎಸ್ ಐ ಆಪ್ ಪಕ್ಷವನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರ ರಾಜಧಾನಿಗೆ ಅರವಿಂದ್ ಕೇಜ್ರಿವಾಲ್ ಏನೂ ಒಳ್ಳೆಯ ಕೆಲಸ ಮಾಡಿಲ್ಲ. ಈಗ ಪಂಜಾಬ್ ನತ್ತ ಮುಖ ಮಾಡಿದ್ದಾರೆ. ಶಿರೋಮಣಿ ಅಕಾಲಿ ದಳ-ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಕೌರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಪಂಜಾಬ್ ನ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ. ಇವರ ಪಕ್ಷದ ಸಂಸದರು ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಸ್ವತಃ ಕೇಜ್ರಿವಾಲ್ ಮಾಜಿ ಭಯೋತ್ಪಾದಕ ಖಾಲ್ಸಾ ಜೊತೆ ತಿಂಡಿ, ಊಟ ಮಾಡಿದ್ದನ್ನು ನೋಡಿದರೆ ಪಾಕ್ ಐಎಸ್ ಐ ಆಪ್ ಹಾಗೂ ಖಾಲ್ಸಾರನ್ನು ಪೋಷಿಸುತ್ತಿದೆ ಎಂದು ಕೌರ್ ಆರೋಪಿಸಿದ್ದಾರೆ.