ಮುಂಬೈ :  ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ, ಅಜಯ್ ಹಾಗೂ ಸ್ವಾತಿ ಪಿರಮಾಳ್ ಅವರ ಪುತ್ರ ಆನಂದ್ ಪಿರಮಾಳ್ ಅವರ ಕೈ ಹಿಡಿಯುತ್ತಿದ್ದಾರೆ. 

ಇದೇ ಡಿಸೆಂಬರ್ 12ರಂದು ವಿವಾಹ ಸಮಾರಂಭ ನಡೆಯುತ್ತಿದೆ. ಪಿರಮಾಳ್ ಹಾಗೂ ಅಂಬಾನಿ ಕುಟುಂಬ ಕಳೆದ ಸೆಪ್ಟೆಂಬರ್ ನಲ್ಲಿ ಇಟಲಿಯಲ್ಲಿ ಈ ಜೋಡಿಯ ನಿಶ್ಚಿತಾರ್ಥವನ್ನು ನಡೆಸಿತ್ತು. 

ಡಿಸೆಂಬರ್ ತಿಂಗಳಲ್ಲಿ ರಾಯಲ್ ವೆಡ್ಡಿಂಗ್ ನಡೆಯಲಿದ್ದು ಈಗಾಗಲೇ ಅಂಬಾನಿ ಹಾಗೂ ಪಿರಮಾಳ್ ಕುಟುಂಬ ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ.

ವಿವಾಹದ ಬಳಿಕ ಆನಂದ್ ಹಾಗೂ ಇಶಾ ಮುಂಬೈನ ವರ್ಲಿ ಪ್ರದೇಶದಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ಸುಂದರವಾದ ಬಂಗಲೆಯಲ್ಲಿ ವಾಸ ಮಾಡಲಿದ್ದಾರೆ. 

450 ಕೋಟಿ ಬೆಲೆ ಬಾಳುವ ಈ ಬಂಗಲೆಯನ್ನು 6 ವರ್ಷಗಳ ಹಿಂದೆ ಪಿರಮಾಳ್ ಕುಟುಂಬ ಖರೀದಿ ಮಾಡಿತ್ತು. ಇದೀಗ ನೂತನ ಜೋಡಿ ಮದುವೆ ಬಳಿಕ ಮನೆ ಪ್ರವೇಶಿಸಲಿದ್ದಾರೆ. 

ಈ ಬಂಗೆಲೆಗೆ ಗುಲಿಟಾ ಬಿಲ್ಡಿಂಗ್ ಎಂದು ಹೆಸರಿದ್ದು ಆನಂದ್ ಪೋಷಕರಾದ ಸ್ವಾತಿ ಹಾಗೂ ಅಜಯ್ ದಂಪತಿ ವಧು ವರರಿಗೆ ಈ ಬಂಗಲೆಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.