ಮುಂಬೈ :  ವಿಶ್ವದ ಶ್ರೀಮಂತ ಉದ್ಯಮಿ  ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್ ಪಿರಮಾಳ್ ಅವರ ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ. 

ಈ ಅದ್ದೂರಿ ವಿವಾಹಕ್ಕೆ ಈಗಾಗಲೇ ವೆಡ್ಡಿಂಗ್ ಕಾರ್ಡ್ ಕೂಡ ಪ್ರಿಂಟ್ ಆಗಿದ್ದು ರಾಯಲ್ ಕುಟುಂಬದ ಈ ವೆಡ್ಡಿಂಗ್  ಇನ್ವಿಟೇಶನ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. 

ಬಂಗಾರದ ಎಂಬ್ರಾಯಿಡರಿ ಇದ್ದು ಗುಲಾಬಿ ಬಣ್ಣದ  ಬಾಕ್ಸ್ ನಲ್ಲಿದ್ದು, ಅದನ್ನು ತೆರೆದಾಗ ಗಾಯತ್ರಿ ಮಂತ್ರ ಕೇಳಬಹುದು. 

ಇನ್ನು ಇದರಲ್ಲಿ ದೇವಿ ಗಾಯತ್ರಿ ದೇವಿಯ ಫೊಟೊ ಇರುವ ಬಂಗಾರದ ಪುಟ್ಟ ಪುಟ್ಟ ನಾಲ್ಕು ಬಾಕ್ಸ್ ಗಳನ್ನು ಇರಿಸಲಾಗಿದೆ. ಇದರಲ್ಲಿ ವಿವಾಹಕ್ಕೆ ಆಹ್ವಾನಿಸಲಾಗಿದೆ. ರಾಯಲ್ ವೆಡ್ಡಿಂಗ್ ಕಾರ್ಡ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಮಾಡುತ್ತಿದೆ.

ಇದೇ ಡಿಸೆಂಬರ್ 12 ರಂದು ಇಶಾ ಹಾಗೂ ಆನಂದ್ ಪಿರಮಾಳ್ ವಿವಾಹ ನಡೆಯಲಿದೆ.