ಕೆಲವರು ಈ ಫೋಟೋವನ್ನು ಶೇರ್ ಮಾಡಿ ‘ಇಬ್ಬರೂ ಸಸ್ಯಾಹಾರಿಗಳು, ಇಬ್ಬರೂ ಅಲ್ಪಸಂಖ್ಯಾತರನ್ನು ವಿರೋಧಿಸುತ್ತಾರೆ. ಇಬ್ಬರೂ ಮಕ್ಕಳ ಕಿವಿ ಹಿಂಡುತ್ತಿದ್ದಾರೆ, ಎಂಥಾ ಸಾಮ್ಯತೆ!! ಈಗ 3ನೇ ವಿಶ್ವ ಯುದ್ಧಕ್ಕಾಗಿ ಕಾಯುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಆದರೆ ನಿಜಕ್ಕೂ ಹಿಟ್ಲರ್ ಮತ್ತು ಮೋದಿ ಮಗುವಿನ ಕಿವಿ ಹಿಂಡುತ್ತಿರುವುದು ಸತ್ಯವೇ ಎಂದು ಹುಡುಕಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.
ಭಿನ್ನತೆಯನ್ನು ಗುರುತಿಸಿ’ಎಂಬ ಅಡಿಬರಹದೊಂದಿಗೆ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಾಲಕಿ ಕಿವಿ ಹಿಡಿದು ಎಳೆಯುತ್ತಿರುವ ದೃಶ್ಯ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಲಕನೊಬ್ಬನ ಕಿವಿ ಹಿಂಡುತ್ತಿರುವ ದೃಶ್ಯದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಈ ಫೋಸ್ಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾವಿರಾರು ಬಾರಿ ಶೇರ್ ಆಗಿದೆ.
ಕೆಲವರು ಈ ಫೋಟೋವನ್ನು ಶೇರ್ ಮಾಡಿ ‘ಇಬ್ಬರೂ ಸಸ್ಯಾಹಾರಿಗಳು, ಇಬ್ಬರೂ ಅಲ್ಪಸಂಖ್ಯಾತರನ್ನು ವಿರೋಧಿಸುತ್ತಾರೆ. ಇಬ್ಬರೂ ಮಕ್ಕಳ ಕಿವಿ ಹಿಂಡುತ್ತಿದ್ದಾರೆ, ಎಂಥಾ ಸಾಮ್ಯತೆ!! ಈಗ 3ನೇ ವಿಶ್ವ ಯುದ್ಧಕ್ಕಾಗಿ ಕಾಯುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಆದರೆ ನಿಜಕ್ಕೂ ಹಿಟ್ಲರ್ ಮತ್ತು ಮೋದಿ ಮಗುವಿನ ಕಿವಿ ಹಿಂಡುತ್ತಿರುವುದು ಸತ್ಯವೇ ಎಂದು ಹುಡುಕಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.
‘ಆಲ್ಟ್ ನ್ಯೂಸ್’ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಈ ಕುರಿತು ಪರಿಶೀಲನೆ ನಡೆಸಿದಾಗ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಿಟ್ಲರ್ ಚಿತ್ರವು ಫೋಟೋಶಾಪ್ ಮಾಡಿದ್ದಾಗಿದೆ ಎಂಬುದು ಪತ್ತೆಯಾಗಿದೆ. ಮೂಲ ಚಿತ್ರದಲ್ಲಿ ಹಿಟ್ಲರ್ ಮಗುವಿನ ಕಿವಿ ಹಿಂಡುತ್ತಿಲ್ಲ. ಬದಲಾಗಿ ಮಗುವಿನ ಭುಜದ ಮೇಲೆ ಕೈ ಇಟ್ಟುಕೊಂಡಿದ್ದಾರೆ. ಹಾಗೆಯೇ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪ್ರಧಾನಿ ಮೋದಿ ಎಡಗೈಯನ್ನು ಹಿಟ್ಲರ್ ಬಲಗೈ ಆಗಿ ಹಾಗೂ ಮೋದಿ ಬಲಗೈಯನ್ನು ಹಿಟ್ಲರ್ ಎಡಗೈ ಆಗಿ ಫೋಟೋಶಾಪ್ ಮೂಲಕ ಜೋಡಿಸಲಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಟ್ಲರ್‌ಗಿರುವ ಸಾಮ್ಯತೆ ಎಂದು ಹರಿದಾಡುತ್ತಿರುವ ಚಿತ್ರ ನಕಲಿ ಚಿತ್ರ.