ಸದ್ಯದಲ್ಲೇ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಕೊಳ್ಳಲಿದ್ದು, ಈ ವಾರದಲ್ಲಿ ಅಧಿಕೃತ ಪ್ರಕಟ ಸಾಧ್ಯತೆ ಎನ್ನಲಾಗಿದೆ.

ಬೆಂಗಳೂರು(ಜು.25): ಅರಣ್ಯ ಹಾಗೂ ಪರಿಸರ ಖಾತೆ ಸಚಿವ ರಮಾನಾಥ್ ರೈ'ಗೆ ಗೃಹ ಖಾತೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಇಂದು ಸಂಜೆ ರೈ ಅವರನ್ನು ಭೇಟಿ ಮಾಡಿದ ಸಿಎಂ ಗೃಹ ಖಾತೆಯನ್ನು ಒಪ್ಪಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಮೊದಮೊದಲು ಗೃಹಖಾತೆ ಬೇಡವೆಂದು ಸಿಎಂ'ಗೆ ರಮಾನಾಥ್ ಮನವಿ ಮಾಡಿದ್ದರು. ಆದರೆ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧರಿಸುವುದಾಗಿ ರಮಾನಾಥ್ ರೈ'ಗೆ ಮನವರಿಕೆ ಮಾಡಲಾಗಿದೆ. ಸದ್ಯದಲ್ಲೇ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಕೊಳ್ಳಲಿದ್ದು, ಈ ವಾರದಲ್ಲಿ ಅಧಿಕೃತ ಪ್ರಕಟ ಸಾಧ್ಯತೆ ಎನ್ನಲಾಗಿದೆ.