ಆದರೆ ಲೋಕಸಭೆಗೆ ಸ್ಫರ್ಧಿಸಲು ಆಸಕ್ತಿ ಹೊಂದಿಲ್ಲದ ಪ್ರಜ್ವಲ್, ವಿಧಾನಸಭೆಯತ್ತಲೇ ಹೆಚ್ಚು ಒಲವು ಹೊಂದಿದ್ದು ಓಡಾಟ ನಡೆಸುತ್ತಿದ್ದಾರೆ. ಹೀಗಾಗಿಯೇ ಬೇಲೂರು ಮತ್ತು ಹುಣಸೂರಿನಲ್ಲಿ ಸಾಕಷ್ಟು ಓಡಾಟ ನಡೆಸಿದ್ದ  ಪ್ರಜ್ವಲ್ , ಕೆಲವು ದಿನಗಳ ಹಿಂದೆ ನೀಡಿದ್ದ ಸೂಟ್ ಕೇಸ್ ವಿಚಾರದ ಕುರಿತ ಹೇಳಿಕೆ ಜೆಡಿಎಸ್ ಪಕ್ಷದಲ್ಲಿ ಸಾಕಷ್ಟು ಮುಜುಗರ ತಂದಿಟ್ಟಿತ್ತು. ಇನ್ನು ವಿಧಾನಸಭೆಗೆ ಸ್ಫರ್ಧಿಸಬೇಕು ಎಂಬ ಪ್ರಜ್ವಲ್ ನಿಲುವಿಗೆ ತಾಯಿ  ಭವಾನಿ ರೇವಣ್ಣ ಅವರ ಪೂರ್ಣ ಬೆಂಬಲವಿದೆ.

ಹಾಸನ(ಜು.17): ಹುಣಸೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದ ಪ್ರಜ್ವಲ್ ರೇವಣ್ಣಗೆ ಅಸೆಂಬ್ಲಿ‌ ಟಿಕೆಟ್ ಸಿಗುವುದು ಅನುಮಾನವಾಗಿದೆ. ಪ್ರಜ್ವಲ್ ರನ್ನು ಹಾಸನದಿಂದ ಲೋಕಸಭೆಗೆ ತಮ್ಮ ಉತ್ತರಾಧಿಕಾರಿಯನ್ನಾಗಿಸಲು ದೇವೇಗೌಡರು ಚಿಂತನೆ ನಡೆಸಿದ್ದಾರೆ. ಆದರೆ ಲೋಕಸಭೆಯ ಬದಲು ವಿಧಾನಸಭೆಯತ್ತಲೇ ಪ್ರಜ್ವಲ್ ಹೆಚ್ಚು ಆಸಕ್ತರಾಗಿದ್ದರೆ, ಗೌಡರು ಮೊಮ್ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ವಿಧಾನಸಭೆ ಪ್ರವೇಶ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದ ಪ್ರಜ್ವಲ್ ರೇವಣ್ಣಗೆ ಎಂಎಲ್ಎ ಟಿಕೆಟ್ ಇಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ವಿಧಾನಸಭೆಯ ಬದಲು 2019ರ ಲೋಕಸಭಾ ಚುನಾವಣೆಯ ಟಿಕೆಟ್ ನೀಡಲು ದೇವೇಗೌಡರ ನಿರ್ಧಾರ ಮಾಡಿದ್ದು, 2019ರ ಹಾಸನದಿಂದ ಪ್ರಜ್ವಲ್ ಅವರನ್ನು ಕಣಕ್ಕಿಳಿಸಲು ದೇವೇಗೌಡರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುಮಾರು ಹದಿನೈದು ದಿನಗಳ ಹಿಂದೆ ಹೇಳಿಕೆ ನೀಡಿದ್ದ ದೇವೇಗೌಡರು 2019ಕ್ಕೆ ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ಜೆಡಿಎಸ್ ಅಭ್ಯರ್ಥಿ ಎಂಬರ್ಥದ ರೀತಿಯಲ್ಲೇ ಮಾತನಾಡಿದ್ದರು. ಹೀಗಾಗಿ ಈಗ 2018ರ ವಿಧಾನಸಭೆಗೆ ಪ್ರಜ್ವಲ್ ಗೆ ಟಿಕೆಟ್ ಲಭಿಸುವುದು ಅನುಮಾನವಾಗಿದೆ.

ಆದರೆ ಲೋಕಸಭೆಗೆ ಸ್ಫರ್ಧಿಸಲು ಆಸಕ್ತಿ ಹೊಂದಿಲ್ಲದ ಪ್ರಜ್ವಲ್, ವಿಧಾನಸಭೆಯತ್ತಲೇ ಹೆಚ್ಚು ಒಲವು ಹೊಂದಿದ್ದು ಓಡಾಟ ನಡೆಸುತ್ತಿದ್ದಾರೆ. ಹೀಗಾಗಿಯೇ ಬೇಲೂರು ಮತ್ತು ಹುಣಸೂರಿನಲ್ಲಿ ಸಾಕಷ್ಟು ಓಡಾಟ ನಡೆಸಿದ್ದ ಪ್ರಜ್ವಲ್ , ಕೆಲವು ದಿನಗಳ ಹಿಂದೆ ನೀಡಿದ್ದ ಸೂಟ್ ಕೇಸ್ ವಿಚಾರದ ಕುರಿತ ಹೇಳಿಕೆ ಜೆಡಿಎಸ್ ಪಕ್ಷದಲ್ಲಿ ಸಾಕಷ್ಟು ಮುಜುಗರ ತಂದಿಟ್ಟಿತ್ತು. ಇನ್ನು ವಿಧಾನಸಭೆಗೆ ಸ್ಫರ್ಧಿಸಬೇಕು ಎಂಬ ಪ್ರಜ್ವಲ್ ನಿಲುವಿಗೆ ತಾಯಿ ಭವಾನಿ ರೇವಣ್ಣ ಅವರ ಪೂರ್ಣ ಬೆಂಬಲವಿದೆ.

ವಿಧಾನಸಭೆಗೆ ಯಾಕೆ ಒಲವು?

* ಲೋಕಸಭಾ ಸದಸ್ಯನಾದರೆ ೫ ವರ್ಷಗಳ ಕಾಲ ರಾಜ್ಯದ ಹಿಡಿತ ತಪ್ಪಿ ಹೋಗುತ್ತೆ

* 2018ಕ್ಕೆ ಸಮ್ಮಿಶ್ರ ಸರಕಾರ ಬಂದರೆ ಸಚಿವನಾಗಬಹುದು‌

* ಲೋಕಸಭಾ ಸದಸ್ಯನಾಗಿ ರಾಜ್ಯಕ್ಕೆ ಮರಳಿದರೆ ಆಗ ರಾಜ್ಯದಲ್ಲಿ ಪರಿಸ್ಥಿತಿ ಬದಲು 

* ಆಗ ಅವಕಾಶಗಳು ಕೂಡಾ ಪೂರಕವಾಗಿರುವುದಿಲ್ಲ

* ೫ ವರ್ಷದ ಬಳಿಕ ಜೆಡಿಎಸ್ ನ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ

* ಪಕ್ಷ ಕುಮಾರಸ್ವಾಮಿ ಹಿಡಿತಕ್ಕೆ ಬಂದ ಬಳಿಕ ಅವಕಾಶ ಸಿಗುವ ಸಾಧ್ಯತೆ ಕಷ್ಟ

ಈ ಕಾರಣಗಳಿಗಾಗಿಯೇ 2018ಕ್ಕೆ ವಿಧಾನಸಭೆ ಪ್ರವೇಶ ಮಾಡಲೇಬೇಕೆಂಬ ಚಿಂತನೆಯನ್ನು ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣ ಹೊಂದಿದ್ದಾರೆ. ಆದರೆ ತಾವು ಮೊಮ್ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಿ ಪ್ರಜ್ವಲ್ ರನ್ನು ಹಾಸನದಿಂದ ಲೋಕಸಭಾ ಅಭ್ಯರ್ಥಿ ಮಾಡುವ ಬಗ್ಗೆ ದೇವೇಗೌಡರ ತೀರ್ಮಾನ ಬಹುತೇಕ ಅಂತಿಮವಾಗಿದೆ. ಆದರೆ ಒಂದು ವೇಳೆ ವಿಧಾನಸಭೆಗೆ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ದೊರೆತಲ್ಲಿ ದೇವೇಗೌಡರ ಈ ಲೆಕ್ಕಾಚಾರ ಅಷ್ಟು ಸುಲಭವಾಗಿ ಈಡೇರುವುದು ಕಷ್ಟ ಸಾಧ್ಯ.