ಚಲುವರಾಯಸ್ವಾಮಿ ಅವರನ್ನು ಟಾರ್ಗೆಟ್ ಮಾಡ್ತಾ ಜೆಡಿಎಸ್?

Is JD(S) target ex Minister Chaluvarayaswamy?
Highlights

ಮಂಡ್ಯದಲ್ಲಿ ಶುರುವಾಯ್ತು ದ್ವೇಷದ ರಾಜಕಾರಣ?

ಜೆಡಿಎಸ್ ಪಕ್ಷದ ಟಾರ್ಗೆಟ್ ಚಲುವರಾಯಸ್ವಾಮಿ?

ಜೆಡಿಎಸ್ ನಿಂದ ಬಂಡೆದ್ದು ಕಾಂಗ್ರೆಸ್ ಸೇರಿದ್ದ ನಾಯಕ

ಚಲುವರಾಯಸ್ವಾಮಿ ಒಡೆತನದ ಕ್ರಷರ್ ಮೇಲೆ ಅಧಿಕಾರಿಗಳ‌ ದಾಳಿ

ದಾಳಿಯಲ್ಲಿ ಟಿಪ್ಪರ್ ವಶ, ಕ್ರಷರ್ ಗೆ ಬೀಗ ಮುದ್ರೆ

ಮಂಡ್ಯ(ಜು.4): ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಿಂದ ಬಂಡೆದ್ದು ಕಾಂಗ್ರೆಸ್ ಪಕ್ಷ ಸೇರಿದ್ದ ಚಲುವರಾಯಸ್ವಾಮಿ ಇದೀಗ ಜೆಡಿಎಸ್ ಪಕ್ಷದ ಟಾರ್ಗೆಟ್ ಆಗಿದ್ದಾರೆ. ಚಲುವರಾಯಸ್ವಾಮಿ ಒಡೆತನದ ಹೊನ್ನಾದೇವಿ ಸ್ಟೋನ್ ಕ್ರಷರ್ ಮೇಲೆ ಅಧಿಕಾರಿಳು ದಾಳಿ ನಡೆಸಿರುವುದು ಇದಕ್ಕೆ ಪುಷ್ಠಿ ನೀಡಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಇಜ್ಜಲಘಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು, ದಾಳಿ ನಡೆಸಿ ಟಿಪ್ಪರ್ ವಶಪಡಿಸಿಕೊಂಡು ಕ್ರಷರ್ ಗೆ ಬೀಗಮುದ್ರೆ ಹಾಕಿದ್ದಾರೆ. ಇದು ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಒಡೆತನದ ಕ್ರಷರ್ ಎಂದು ಹೇಳಲಾಗಿದ್ದು,  ಜೆಡಿಎಸ್ ಚಲುವರಾಯಸ್ವಾಮಿ ಮೇಲೆ ದ್ವೇಷ ಸಾಧಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿರುವ ಎಸ್.ಟಿ.ಜೆ. ಸ್ಟೋನ್ ಕ್ರಷರ್, ಸಣ್ಣ ನೀರಾವರಿ ಸಚಿವ ಪುಟ್ಟರಾಜು ಒಡೆತನದಲ್ಲಿದೆ. ಆದರೆ ಅಧಿಕಾರಿಗಳು ಕೇವಲ ಚಲುವರಾಯಸ್ವಾಮಿ ಒಡೆತನದ ಕ್ರಷರ್ ಮೇಲೆ ದಾಳಿ ಮಾಡಿರುವುದು ಇಂತಹ ಮಾತುಗಳಿಗೆ ಮತ್ತಷ್ಟು ಇಂಬು ನೀಡಿದೆ.

loader