ನಿನ್ನೆ ಸಿಎಂ ನೀಡಿದ್ದ ಒಂದು ಹೇಳಿಕೆ ಇದೀಗ, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇಂಧನ ಸಚಿವ ಡಿ‌ಕೆ ಶಿವಕುಮಾರ್ ಹಾಗೂ ಸಹೋದರ ಸಂಸದ ಡಿ.ಕೆ ಸುರೇಶ್'ರನ್ನ ಬಿಜೆಪಿಗೆ ಸೆಳೆಯಲು ಯತ್ನಿಸಲಾಗುತ್ತಿದೆ ಎಂಬ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸುದ್ದಿಯಲ್ಲಿದೆ.
ಬೆಂಗಳೂರು (ನ.09): ನಿನ್ನೆ ಸಿಎಂ ನೀಡಿದ್ದ ಒಂದು ಹೇಳಿಕೆ ಇದೀಗ, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇಂಧನ ಸಚಿವ ಡಿಕೆ ಶಿವಕುಮಾರ್ ಹಾಗೂ ಸಹೋದರ ಸಂಸದ ಡಿ.ಕೆ ಸುರೇಶ್'ರನ್ನ ಬಿಜೆಪಿಗೆ ಸೆಳೆಯಲು ಯತ್ನಿಸಲಾಗುತ್ತಿದೆ ಎಂಬ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸುದ್ದಿಯಲ್ಲಿದೆ.
ನಿನ್ನೆ , ನೋಟ್ ಬ್ಯಾನ್ ಕರಾಳ ದಿನದ ಆಚರಣೆ ವೇಳೆ ಮಾತನಾಡಿದ್ದ ಸಿಎಂ, ಡಿಕೆಶಿ ಮನೆ ಮೇಲೆ ಐಟಿ ದಾಳಿ ನಡೆದಿದ್ದ ವೇಳೆ ಕೆಲ ಅಧಿಕಾರಿಗಳು ಬಿಜೆಪಿಗೆ ಸೇರುವಂತೆ ತಿಳಿಸಿದ್ದರು ಎಂದಿದ್ದರು. ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಡಿ.ಕೆ. ಶಿವಕುಮಾರ್ ಹುಟ್ಟು ಕಾಂಗ್ರೆಸ್ಸಿಗ. ಬಿಜೆಪಿಯವರು ಅವರನ್ನು ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸಿದ್ದಾರೆ. ಐಟಿ ಮೂಲಕ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆಲ್ಲ ಡಿ.ಕೆ. ಶಿವಕುಮಾರ್ ಮಣಿಯಲ್ಲ ಅಂತಾ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಸಿಎಂ ನಿನ್ನೆ ಹೇಳಿದ್ದ ಮಾತಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಈಶ್ವರಪ್ಪ, ಐಟಿ ಅಧಿಕಾರಿಗಳ ಮೂಲಕ ಒತ್ತಡ ಹಾಕಿರುವ ಆರೋಪ ಆಧಾರರಹಿತ. ಅವರು ಬಿಜೆಪಿ ಸೇರ್ಪಡೆಯಾಗ್ತೀನಿ ಅಂದ್ರೂ ನಾವು ಸೇರಿಸಿಕೊಳ್ಳಲ್ಲ ಎಂದಿದ್ದಾರೆ.
ಬಿಜಿಪಿ ಸೇರ್ಪಡೆ ಬಗ್ಗೆ ಸಂಸದ ಡಿ.ಕೆ. ಸುರೇಶ್ ರಾಮನಗರದಲ್ಲಿ ಹೇಳಿಕೆ ನೀಡಿದ್ದು, ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆದು ಬೇರೆಡೆ ಹೋಗಲ್ಲ. ಈಗಾಲೇ ಡಿ.ಕೆ. ಶಿವಕುಮಾರ್ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ, ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಜೋರಾಗಿ ನಡೆದಿದ್ದು, ಪ್ರಭಾವಿ ನಾಯಕರನ್ನ ತಮ್ಮತ್ತ ಸೆಳೆಯಲು ಪ್ಲಾನ್ ನಡೆದಿತ್ತಾ ಎಂಬ ಮಾತುಗಳು ಕೇಳಿಬಂದಿದೆ.
