ಬಾಬಾ ರಾಮ್ ರಹೀಂ ಸಿಂಗ್ ದೋಷಿಯೆಂದು ತೀರ್ಪು ಹೊರಬಿದ್ದ ಬಳಿಕ ನಡೆದ ಹಿಂಸಾಚಾರ ಪೂರ್ವನಿಯೋಜಿತವೇ ಎಂಬುದಕ್ಕೆ ಪುಷ್ಠಿ ನೀಡುವ ಆಡಿಯೋ ಕ್ಲಿಪ್ ಈಗ ಬಹಿರಂಗಗೊಂಡಿದೆ. ಸುವರ್ಣನ್ಯೂಸ್'ಗೆ ಲಭಿಸಿರುವ ಆಡಿಯೋ ಕ್ಲಿಪ್'ನಲ್ಲಿ ಬಾಬಾನ ಇಬ್ಬರು ಬೆಂಬಲಿಗರ ನಡುವೆ ನಡೆದ ಸಂಭಾಷಣೆ ದಾಖಲಾಗಿದ್ದು, ಬಾಬಾ ಹೆಸರು ಎಲ್ಲೂ ಹೊರಗೆ ಬರದಂತೆ ಎಚ್ಚರಿಕೆ ವಹಿಸಲಾಗಿದೆ.
ಚಂಡೀಗಢ: ಬಾಬಾ ರಾಮ್ ರಹೀಂ ಸಿಂಗ್ ದೋಷಿಯೆಂದು ತೀರ್ಪು ಹೊರಬಿದ್ದ ಬಳಿಕ ನಡೆದ ಹಿಂಸಾಚಾರ ಪೂರ್ವನಿಯೋಜಿತವೇ ಎಂಬುದಕ್ಕೆ ಪುಷ್ಠಿ ನೀಡುವ ಆಡಿಯೋ ಕ್ಲಿಪ್ ಈಗ ಬಹಿರಂಗಗೊಂಡಿದೆ.
ಸುವರ್ಣನ್ಯೂಸ್'ಗೆ ಲಭಿಸಿರುವ ಆಡಿಯೋ ಕ್ಲಿಪ್'ನಲ್ಲಿ ಬಾಬಾನ ಇಬ್ಬರು ಬೆಂಬಲಿಗರ ನಡುವೆ ನಡೆದ ಸಂಭಾಷಣೆ ದಾಖಲಾಗಿದ್ದು, ಬಾಬಾ ಹೆಸರು ಎಲ್ಲೂ ಹೊರಗೆ ಬರದಂತೆ ಎಚ್ಚರಿಕೆ ವಹಿಸಲಾಗಿದೆ.
ಮಾಧ್ಯಮಗಳು ಕೇಳಿದರೆ ಸ್ವಯಂ ಪ್ರೇರಿತವಾಗಿ ಬಂದಿದ್ದೇವೆ ಎಂದು ಹೇಳಿ, ಶಸ್ತ್ರಾಸ್ತ್ರಗಳನ್ನು ರೆಡಿಯಾಗಿಡಿ, ಯಾರಿಗೂ ತೋರಿಸಬೇಡಿ, ಅಗತ್ಯ ಬಿದ್ದಾಗ ಬಳಸೋಣ ಎಂದು ಚರ್ಚಿಸಲಾಗಿದೆ.
ತೀರ್ಪು ಹೊರಬೀಳುವ 3 ದಿನ ಮೊದಲೇ ಪಂಚಕುಲಾದಲ್ಲಿ ಸೇರಿದ್ದ ಬಾಬಾ ಬೆಂಬಲಿಗರು, ತೀರ್ಪು ನೀಡುವ ಮೊದಲೇ ಗಲಭೆ ನಡೆಸಲು ಬೆಂಬಲಿಗರ ಸ್ಕೆಚ್ ಹಾಕಿಕೊಂಡಿದ್ದರು ಎಂಬುವುದು ಈ ಸಂಭಾಷಣೆಯಲ್ಲಿ ತಿಳಿದು ಬರುತ್ತದೆ.
ಬಾಬಾ ರಾಮ್ ರಹೀಂ ಸಿಂಗ್ ದೋಷಿಯೆಂದು ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿ ಬಳಿಕ ನಡೆದ ಹಿಂಸಾಚಾರದಲ್ಲಿ ಸುಮಾರು 26 ಮಂದಿ ಬಲಿಯಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
