ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ನಗರದಲ್ಲಿ ಚಾತುರ್ಮಾಸ್ಯ ಆಚರಿಸುತ್ತಿರುವ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಸ್ವಾಮೀಜಿಯನ್ನು ಗುರುವಾರ ಭೇಟಿಯಾಗಿ ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ಗುರುಗಳು ಯಡಿಯೂರಪ್ಪನವರೊಂದಿಗೆ ಉಭಯಕುಶಲೋಪರಿ ವಿಚಾರಿಸುತ್ತಲೇ ಹತ್ತಿರ ಕರೆದು ‘ನೀವು ಯಾವುದಕ್ಕೂ ಅಂಜಬೇಡಿ. ಹಿಂದೆ ಸರಿಯಬೇಡಿರಿ, ಮುನ್ನುಗ್ಗಿರಿ, ನಿಮಗೆ ಉತ್ತಮ ಯೋಗವಿದೆ’ ಎಂದ ಪ್ರಸಂಗವೂ ನಡೆಯಿತು. 

ಈ ಹಂತದಲ್ಲಿ ಸ್ವಾಮೀಜಿ, ‘ಯಡಿಯೂರಪ್ಪನವರಿಗೆ ಮಂತ್ರಿಗಿರಿ ಯೋಗವಿದೆ’ ಎಂದಾಗ ಸೇರಿದ್ದ ಜನಸ್ತೋಮ ‘ಮುಖ್ಯಮಂತ್ರಿಗಿರಿ’ ಎಂದು ಹೇಳಿದರು. ಆಗ ಸ್ವಾಮೀಜಿ ‘ಮಂತ್ರಿ ಎಂದರೆ ಅದೆಲ್ಲವೂ ಒಂದೇ ಅರ್ಥ...’ ಎಂದು ನಕ್ಕರು.