ಬಾಲಿವುಡ್ ನ ಖ್ಯಾತ ನಟ ಇರ್ಫಾನ್ ಖಾನ್ ಅಪರೂಪದ ಖಾಯಿಲೆಗೆ ತುತ್ತಾಗಿದ್ದಾರೆ. ಈ ಕುರಿತು ಸ್ವತಹಃ ಇರ್ಫಾನ್ ಖಾನ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದು, ತಾವು ನ್ಯೂರೋ ಎಂಡೋಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದೇನೆ. ಆದ್ದರಿಂದ ತಾವು ವಿದೇಶದಲ್ಲಿ ಚಿಕಿತ್ಸೆ ಪಡೆಯಲು ತೆರಳುತ್ತಿರುವುದಾಗಿ ಹೇಳಿದ್ದಾರೆ.

ನವದೆಹಲಿ (ಮಾ. 17): ಬಾಲಿವುಡ್ ನ ಖ್ಯಾತ ನಟ ಇರ್ಫಾನ್ ಖಾನ್ ಅಪರೂಪದ ಖಾಯಿಲೆಗೆ ತುತ್ತಾಗಿದ್ದಾರೆ. ಈ ಕುರಿತು ಸ್ವತಹಃ ಇರ್ಫಾನ್ ಖಾನ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದು, ತಾವು ನ್ಯೂರೋ ಎಂಡೋಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದೇನೆ. ಆದ್ದರಿಂದ ತಾವು ವಿದೇಶದಲ್ಲಿ ಚಿಕಿತ್ಸೆ ಪಡೆಯಲು ತೆರಳುತ್ತಿರುವುದಾಗಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಟ್ವೀಟರ್ ಖಾತೆಯಲ್ಲಿ ಅವರು, ನನಗೆ ನ್ಯೂರೋಎಂಡೋಕ್ರೀನ್ ಟ್ಯೂಮರ್ ಇದೆ ಎಂಬುದನ್ನು ಅರಿಗಿಸಿಕೊಳ್ಳುವುದು ಕಷ್ಟಕರವಾಗಿದೆ. ಈ ಪಯಣ ನನ್ನನ್ನು ದೇಶದ ಹೊರಗೆ ಕರೆದೊಯ್ದಿದೆ. ಎಲ್ಲರಿಗೂ ತಮ್ಮ ಹಾರೈಕೆಗಳನ್ನು ಕಳುಹಿಸುವಂತೆ ಕೋರುತ್ತಿದ್ದೇನೆ. ನಾನು ಮತ್ತೆ ಹೊಸ ಕಥೆಗಳೊಂದಿಗೆ ಬರುತ್ತೇನೆಂಬ ಆಶಾಭಾವನೆಯಿದೆ' ಎಂದು ತಿಳಿಸಿದ್ದಾರೆ.

Scroll to load tweet…