ಸರ್ಕಾರದ ಉಚಿತ ಅಕ್ಕಿ ಬೆಳಗಾವಿ ಗಡಿಯಲ್ಲಿ 10 ರು.ಗೆ ಖರೀದಿ, ಪಾಲಿಷ್ ಮಾಡಿಸಿ ಬ್ರಾಂಡೆಡ್ ಅಕ್ಕಿ ಹೆಸರಿನಲ್ಲಿ ಮಾರುಕಟ್ಟೆಗೆಹೀಗೆ ನಡೆಯುತ್ತೆ ದಂಧೆ:ಸರ್ಕಾರ ನೀಡುವ ಉಚಿತ ಅಕ್ಕಿ 10 ರು.ಗೆ ಖರೀದಿಮಹಾರಾಷ್ಟ್ರದಲ್ಲಿ ಇದೇ ಅಕ್ಕಿಗೆ ವಿಶೇಷ ಪಾಲಿಷ್‌ಕೆ.ಜಿ.ಗೆ ಸುಮಾರು 15 ರು. ವೆಚ್ಚದಲ್ಲಿ ‘ಪಾಲಿಷ್‌ ಭಾಗ್ಯ'ಬಳಿಕ ಪಾಲಿಷ್‌ ಮಾಡಿದ ಅಕ್ಕಿ ಬ್ರಾಂಡೆಡ್‌ ಅಕ್ಕಿ ಹೆಸರಲ್ಲಿ ಪ್ಯಾಕಿಂಗ್‌ಸಾಮಾನ್ಯ ಮಾರುಕಟ್ಟೆಯಲ್ಲಿ 50ರಿಂದ 60 ರು.ಗೆ ಮಾರಾಟ
ಅನ್ನಭಾಗ್ಯ ಅಕ್ಕಿಗೆ ಪಾಲಿಷ್: ಬಾತಿ ಸಿದ್ದೇಶ್ವರ ನಿಲಯ ಎಂಬ ಹೆಸರಿನ ಈ ಗೋದಾಮು ಹೆಸರಿಗೆ ಮಾತ್ರವೇ ಕೋಳಿ ಫಾರಂ ಆಗಿದ್ದು, ಅಲ್ಲಿ ಅನ್ನಭಾಗ್ಯ ಅಕ್ಕಿಯ ಕಳ್ಳದಂಧೆಯೇ ಪ್ರಮುಖ ಕಸುಬಾಗಿತ್ತು.
ಅನ್ನಭಾಗ್ಯ ಅಕ್ಕಿಯನ್ನು ಬೇರೆಡೆಯಿಂದ ತರಿಸಿ ಕೊಂಡು , ಅದನ್ನು ಪಾಲಿಷ್ ಮಾಡಿ ನಂದಿ ಬ್ರಾಂಡ್ ಹೆಸರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ದಂಧೆಯ ಪ್ರಮುಖ ರೂವಾರಿ ಉಮಾಪತಿ ವಿರುದ್ಧ ಈ ಮೊದಲೇ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಹೊರಬಂದು ಹಳೇ ಕಸುಬನ್ನೇ ಮುಂದುವರಿಸಿದ್ದ ಎನ್ನಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾಳಿಗೆ ಹೋದ ಅಧಿಕಾರಿಗಳ ಮೇಲೆ ಲಾರಿ ಹರಿಸಲು ಯತ್ನ
ಉಡುಪಿಯಲ್ಲಿ ಮರಳು ಮಾಫಿಯಾದವರು ಡಿಸಿ, ಎಸಿ ಕೊಲೆಗೆ ಯತ್ನಿಸಿದ ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಅಕ್ಕಿ ಕಾಳದಂಧೆಕೋರರು ಅಟ್ಟಹಾಸ ಮೆರೆದಿದ್ದಾರೆ. ತಾಲೂಕಿನ ದೊಡ್ಡಬಾತಿ ಗ್ರಾಮಕ್ಕೆ ಅಕ್ರಮ ಅಕ್ಕಿ ದಾಸ್ತಾನು ಪರಿಶೀಲನೆಗೆ ತೆರಳಿದ್ದ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಆಹಾರ ಇಲಾಖೆ ಉಪನಿರ್ದೇಶಕರ ಮೇಲೆ ಲಾರಿ ನುಗ್ಗಿಸಿ ಕೊಲ್ಲಲು ಯತ್ನಿಸಿದ ಘಟನೆ ಶನಿವಾರ ನಡೆದಿದೆ.
ತಾಲೂಕಿನ ದೊಡ್ಡಬಾತಿ ಗ್ರಾಮದ ದರ್ಗಾ ಸಮೀಪವಿರುವ ಗೋದಾಮಿನಲ್ಲಿ ಅನ್ನಭಾಗ್ಯ ಅಕ್ಕಿಯ ಅಕ್ರಮ ವಹಿವಾಟು ನಡೆಯುತ್ತಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ತಹಸೀಲ್ದಾರ್ ಸಂತೋಷ ಕುಮಾರ್, ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ ನೇತೃತ್ವದ ತಂಡ ದಾಳಿ ನಡೆಸಿತ್ತು.
ಈ ವೇಳೆ ಅಕ್ರಮ ಅಕ್ಕಿ ದಾಸ್ತಾನು ರೂವಾರಿ ಉಮಾಪತಿ ರೂ.50,000 ಲಂಚ ನೀಡಲು ಮುಂದಾಗಿದ್ದಾನೆ. ಆ ದೃಶ್ಯದ ಫೋಟೋ ತೆಗೆಸಿ ಅಧಿಕಾರಿಗಳನ್ನು ಸಿಕ್ಕಿಸಿಹಾಕಿಸಲು ಆತ ಸಂಚು ರೂಪಿಸಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಉಮಾಪತಿ, ಪುತ್ರ ಪ್ರಶಾಂತ್ ಅವರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಹಲ್ಲೆಗೂ ಯತ್ನಿಸಿದ್ದಾರೆ. ಸ್ಥಳದಿಂದ ನಿರ್ಗಮಿಸುತ್ತಿದ್ದ ಲಾರಿಯನ್ನು ಅಧಿಕಾರಿಗಳು ಅಡ್ಡಗಟ್ಟಿನಿಲ್ಲಿಸುವಂತೆ ಸೂಚಿಸಿದಾಗ ಚಾಲಕನು ಅಧಿಕಾರಿಗಳ ಮೇಲೆಯೇ ಲಾರಿ ನುಗ್ಗಿಸುವ ಪ್ರಯತ್ನ ಮಾಡಿದ್ದಾನೆ.
ಏಕಾಏಕಿ ಲಾರಿ ಮುನ್ನುಗ್ಗಿದ್ದರಿಂದ ಅಧಿಕಾರಿಗಳು ಪಕ್ಕಕ್ಕೆ ಸರಿದಿದ್ದು, ಚಾಲಕನು ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಪ್ರಮುಖ ಆರೋಪಿ ಉಮಾಪತಿ ಮತ್ತು ಆತನ ಪುತ್ರ ಪ್ರಶಾಂತ್ನನ್ನು ಪೊಲೀಸರು ಬಂಧಿಸಿದ್ದಾರೆ. ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 560 ಚೀಲ ಅಕ್ಕಿ, ತೂಕದ ಯಂತ್ರ, ಒಂದು ಟ್ರ್ಯಾಕ್ಟರ್, ಎರಡು ಲಾರಿಗಳನ್ನು ಜಪ್ತಿ ಮಾಡಲಾಗಿದೆ.
(ಕನ್ನಡ ಪ್ರಭ ವಿಶೇಷ ವರದಿ)
