ಎಣ್ಣೆ ಏಟು.. ವಿಮಾನದಲ್ಲಿ ಫೈಟು..! ಇದು ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಹೈಡ್ರಾಮ..! ಮುಂದೇನಾಯ್ತು ನೋಡಿ..

ಮುಂಬೈ, [ನ.14]: 'ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವಂತೆ' ಕಂಠ ಪೂರ್ತಿ ಕುಡಿದಿದ್ದ ಯುವತಿಬ್ಬಳು ವಿಮಾನದಲ್ಲಿ ದೊಡ್ಡ ರಾದ್ದಾಂತವೇ ಮಾಡಿದ್ದಾಳೆ.

ಏರ್ ಇಂಡಿಯಾ ವಿಮಾನದಲ್ಲಿ ಹೈಡ್ರಾಮಾವೇ ನಡೆದಿದ್ದು, ಐರಿಶ್ ಮಹಿಳೆಯೊಬ್ಬಳು ಕುಡಿದಮತ್ತಿನಲ್ಲಿ ವಿಮಾನದಲ್ಲೇ ಪುಂಡಾಟ ನಡೆಸಿದ್ದಾಳೆ. 

ಅಲ್ಲದೇ ವಿಮಾನದ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರ ಜೊತೆ ಅನುಚಿತ ವರ್ತಿಸಿದ್ದಾಳೆ. ಮುಂಬೈ ನಿಂದ ಲಂಡನ್ ಮಾರ್ಗವಾಗಿ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. 

ಇದೀಗ ಈ ಮಹಿಳೆಯನ್ನ ಪೊಲೀಸರು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.