ಇರ್ಫಾನ್ ಮತ್ತು ಸಫಾ ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ವಿವಾಹ ಬಂಧನಕ್ಕೊಳಪಟ್ಟಿದ್ದರು.
ಬರೋಡಾ(ಡಿ.20): ‘‘ನಾನು ತಂದೆಯಾಗಿರುವುದಕ್ಕೆ ಅತೀವ ಸಂತಸವಾಗಿದೆ ಎಂದು ಭಾರತದ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವೀಟರ್‌ನಲ್ಲಿ ಹೇಳಿದ್ದಾರೆ.
ಇಂದು ಬೆಳಗ್ಗೆ ಇರ್ಫಾನ್ ಪತ್ನಿ ಸಫಾ ಬೇಗ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇರ್ಫಾನ್ ಮತ್ತು ಸಫಾ ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ವಿವಾಹ ಬಂಧನಕ್ಕೊಳಪಟ್ಟಿದ್ದರು.
‘‘ಇಸ್ ಎಹಾಸಸ್ ಕೊ ಬಯಾನ ಕರ್ನಾ ಮುಷ್ಕಿಲ್ ಹೈ... ಇಸ್ ಮಿ ಬೆಹತ್'ರೀನ್ ಸಿ ಕಶೀಶ್ ಹೇ, ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.
2007ರ ಟಿ20 ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇರ್ಫಾನ್, ನಂತರದ ದಿನಗಳಲ್ಲಿ ಕಳಪೆ ಫಾರ್ಮ್ ಹಾಗೂ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದದ್ದೂ ಅಲ್ಲದೇ 100 ವಿಕೆಟ್ ಸಾಧನೆಯನ್ನೂ ಈ ಬರೋಡದ ಆಟಗಾರ ಮಾಡಿದ್ದಾರೆ.
