ನವದೆಹಲಿ(ಸೆ.22): ಐಆರ್'ಸಿಟಿಸಿಯ ಆನ್'ಲೈನ್ ಸೇವೆಯು 6 ಬ್ಯಾಂಕ್'ಗಳನ್ನು ಹೊರತುಪಡಿಸಿ ಉಳಿದ ಬ್ಯಾಂಕ್'ಗಳ ಡೆಬಿಟ್ ಕಾರ್ಡ್ ಪಾವತಿ ಸೇವೆಯನ್ನು ಸ್ಥಗಿತಗೊಳಿಸಿದೆ.

ಭಾರತೀಯ ರೈಲ್ವೆಗೆ ಐಆರ್'ಸಿಟಿಸಿ ಮೂಲಕ ಆನ್'ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಆದರೆ ಹೆಚ್ಚುವರಿ ಶುಲ್ಕ ವಿಧಿಸುವ ಕಾರಣದಿಂದ ಇಂಡಿಯನ್ ಓವರ್'ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಯುನಿಟೆಡ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್'ಡಿಎಫ್'ಸಿ ಹಾಗೂ ಆಕ್ಸಿಸ್ ಬ್ಯಾಂಕ್'ಗಳ ಡೆಬಿಟ್ ಕಾರ್ಡ್ ಸೇವೆಯನ್ನು ಹೊರತುಪಡಿಸಿ ಉಳಿದ ಬ್ಯಾಂಕ್'ಗಳ ಸೇವೆಯನ್ನು ಸ್ಥಗಿತಗೊಳಿಸಿದೆ.

500 ಹಾಗೂ 1000 ರೂ. ಅಪಮೌಲ್ಯಿಕರಣದ ನಂತರ ಐಆರ್'ಸಿಟಿಸಿಯ ಆನ್'ಲೈನ್ ಪಾವತಿಗೆ ಯಾವುದೇ ಶುಲ್ಕ ವಿಧಿಸಲಾಗುತ್ತಿರಲಿಲ್ಲ. ಕೆಲವು ತಿಂಗಳ ನಂತರ  ಸ್ಲೀಪರ್ ಕೋಟ್'ಗೆ 20 ರೂ. ಹಾಗೂ ಎಸಿ ಕೋಚ್'ಗಳಿಗೆ 40 ರೂ. ತೆರಿಗೆ ವಿಧಿಸಲಾಗುತ್ತಿತ್ತು. 2017ರ ಬಜೆಟ್'ನಲ್ಲಿ ಐಆರ್'ಸಿಟಿಸಿ ಮೂಲಕ ಆನ್'ಲೈನ್ ಬುಕ್ಕಿಂಗ್'ಗೆ ತೆರಿಗೆ ವಿಧಿಸುವುದನ್ನು ರದ್ದುಗೊಳಿಸಲಾಗಿತ್ತು.