ಪ್ರಯಾಣಿಕರ ತೀವ್ರ ಕೊರತೆ ಎದುರಿಸುತ್ತಿರುವ ರೈಲುಗಳನ್ನು ರದ್ದುಗೊಳಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಪ್ರಯಾಣಿಕರ ಕೊರತೆಯಿಂದಾಗಿ ಆಗುತ್ತಿರುವ ಆದಾಯ ನಷ್ಟ ಸರಿದೂಗಿಸಲು ಇಂಥದ್ದೊಂದು ಚಿಂತನೆ ನಡೆದಿದೆ.
ನವದೆಹಲಿ(ಡಿ.8): ಪ್ರಯಾಣಿಕರ ತೀವ್ರ ಕೊರತೆ ಎದುರಿಸುತ್ತಿರುವ ರೈಲುಗಳನ್ನು ರದ್ದುಗೊಳಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಪ್ರಯಾಣಿಕರ ಕೊರತೆಯಿಂದಾಗಿ ಆಗುತ್ತಿರುವ ಆದಾಯ ನಷ್ಟ ಸರಿದೂಗಿಸಲು ಇಂಥದ್ದೊಂದು ಚಿಂತನೆ ನಡೆದಿದೆ.
ಪ್ರಯಾಣಿಕರ ಕೊರತೆ ಇರುವ ರೈಲುಗಳನ್ನು ಅದೇ ಮಾರ್ಗದಲ್ಲಿ ಚಲಿಸುವ ಇತರ ರೈಲುಗಳೊಂದಿಗೆ ವಿಲೀನಗೊಳಿಸುವ ಇಲ್ಲವೇ ಅಂತಹ ರೈಲು ಸೇವೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಯೋಜನೆಯನ್ನು ರೂಪಿಸುತ್ತಿದೆ. ಈ ಕುರಿತು 2018ರ -ಫೆಬ್ರವರಿಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಒಂದು ವೇಳೆ ಈ ಕ್ರಮ ಜಾರಿಯಾದರೆ, ಸರಾಸರಿ ಶೇ.50ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸುವ ರೈಲು ಸೇವೆ ಸ್ಥಗಿತಗೊಳಿಸಲಾಗುತ್ತದೆ. ಪ್ರಯಾಣಿಕರ ಕೊರತೆಯಿರುವ ರೈಲುಗಳಿಂದ ರೈಲ್ವೆಗೆ ವಾರ್ಷಿಕ 30000 ಕೋಟಿ ರು. ನಷ್ಟವಾಗುತ್ತಿದೆ.
