ನವದೆಹಲಿ(ಮೇ.30): ಛಿ..ಏನ್ರೀ ಇದು, ಟಿಕೆಟ್ ಬುಕ್ ಮಾಡಲು ನಿಮ್ಮ ವೆಬ್‌ಸೈಟ್ ಓಪನ್ ಮಾಡಿದರೆ ಕೇವಲ ಅಶ್ಲೀಲ ಫೋಟೋಗಳೇ ಕಾಣಸಿಗುತ್ತವೆ...ಅಂತಾ ವ್ಯಕ್ತಿಯೋರ್ವ ರೈಲ್ವೇ ಇಲಾಖೆಗೆ ಬೆಂಡೆತ್ತಲು ಹೋಗಿ ತಾನೇ ಪೇಚಿಗೆ ಸಿಲುಕಿದ್ದಾನೆ.

ರೈಲ್ವೇ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಲು ಮುಂದಾದ ವ್ಯಕ್ತಿಗೆ ವೆಬ್‌ಸೈಟ್ ತುಂಬಾ ಕೇವಲ ಅಶ್ಲೀಲ ಫೋಟೋಗಳ ದರ್ಶನವಾಗಿದೆ. ಇದರಿಂದ ಕೆರಳಿದ ವ್ಯಕ್ತಿ, ಈ ಕುರಿತು ಇಲಾಖೆಗೆ ನೇರವಾಗಿ ಟ್ವಿಟ್ ಮಾಡಿ ಅಸಮಾಧಾನ ಹೊರಹಾಕಿದ್ದಾನೆ.

ಇದಕ್ಕೆ ಅಷ್ಟೇ ಶಾಂತವಾಗಿ ಉತ್ತರಿಸಿರುವ ಇಲಾಖೆ, ನಮ್ಮ ವೆಬ್‌ಸೈಟ್ ಗೂಗಲ್ ಸರ್ವೀಸ್ ಟೂಲ್ ಬಳಸುತ್ತಿದ್ದು, ವ್ಯಕ್ತಿ ಆನ್‌ಲೈನ್‌ನಲ್ಲಿ ಹೆಚ್ಚು ಹುಡುಕುವ ಲಿಂಕ್‌ನ ಜಾಹೀರಾತು ಕಾಣುತ್ತದೆ ಎಂದು ಸ್ಪಷ್ಟಪಡಿಸಿದೆ.

ಅಂದರೆ ದೂರು ನೀಡಿದ ವ್ಯಕ್ತಿ ಆನ್‌ಲೈನ್‌ನಲ್ಲಿ ಅಶ್ಲೀಲ ಜಾಲತಾಣಗಳಿಗೆ ಹೆಚ್ಚು ಭೇಟಿ ನೀಡಿದ್ದು, ಆತನ ಹುಡುಜಕಾಟದ ಆಧಾರದ ಮೇಲೆ ರೈಲ್ವೇ ಇಲಾಖೆ ವೆಬ್‌ಸೈಟ್‌ನಲ್ಲಿ ಅಶ್ಲೀಲ ಜಾಹೀರಾತುಗಳು ಪ್ರಕಟವಾಗಿವೆ.

ಇಲಾಖೆ ನೀಡಿದ ಉತ್ತರದಿಂದ ಪೇಚಿಗೆ ಸಿಲುಕಿದ ವ್ಯಕ್ತಿ, ಇದೀಗ ತನ್ನ ಟ್ವಿಟ್ ಡಿಲೀಟ್ ಮಾಡಿ ಮುಖ ಮುಚ್ಚಿಕೊಂಡಿದ್ದು ಮಾತ್ರ ಹಾಸ್ಯಾಸ್ಪದ.