ದುಬೈ: ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯ ಸಮಯದಲ್ಲೇ ಬಲೂಚಿಸ್ತಾನದ ಗಡಿಯಲ್ಲಿಯೂ ಜೈಶ್ ಎ-ಮೊಹಮ್ಮದ್ ದಾಳಿ ನಡೆಸಿ, ಇರಾನ್‌ನ 27 ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದರು. 

ಈ ಹಿನ್ನೆಲೆಯಲ್ಲಿ ಇರಾನ್ ಈಗ ಪಾಕಿಸ್ತಾನದ ವಿರುದ್ಧ ಗರಂ ಆಗಿದ್ದು, ಉಗ್ರರ ಬೆಂಬಲಕ್ಕೆ ನಿಲ್ಲದಂತೆ ಎಚ್ಚರಿಸಿದೆ. 

ಇದೇ ವೇಳೆ ಸೌದಿ ಅರೇಬಿಯಾ ಹಾಗೂ ಯುಎಇ ಕೂಡ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.