ಬೆಂಗಳೂರು :  ಲೋಕಾಯುಕ್ತದಲ್ಲಿದ್ದಾಗ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ಎಚ್‌1ಎನ್‌1ನಿಂದ ಬಳಲುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಮಧುಕರ್‌ ಶೆಟ್ಟಿಅವರಿಗೆ ಹೈದರಾಬಾದಿನ ಕಾಂಟಿನೆಂಟಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಡಿಐಜಿ ಮಧುಕರ್‌ ಶೆಟ್ಟಿಅವರ ಶ್ವಾಸಕೋಶಕ್ಕೆ ಸೋಂಕು ತಗುಲಿದ್ದು, ಒಂದು ವಾರದಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ದಿನೇ ದಿನೇ ಬಿಗಡಾಯಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

2ನೇ ಬಾರಿ ಮೊಬೈಲ್‌ ಕಳೆದುಕೊಂಡ ಐಪಿಎಸ್ ಅಧಿಕಾರಿ

ಪ್ರಸ್ತುತ ಮಧುಕರ್‌ ಶೆಟ್ಟಿಅವರು ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿ.ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ಅವಧಿಯಲ್ಲಿ ಲೋಕಾಯುಕ್ತದಲ್ಲಿ ಕೆಲಕಾಲ ಎಸ್ಪಿ ಆಗಿದ್ದ ಅವರು ಭ್ರಷ್ಟರ ನಿದ್ದೆಗೆಡಿಸಿದ್ದರು. ಬಳಿಕ ಅಲ್ಲಿಂದ ಉನ್ನತ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ತೆರಳಿದ್ದರು. ವಿದ್ಯಾಭ್ಯಾಸದ ಬಳಿಕ ರಾಜ್ಯ ಪೊಲೀಸ್‌ ಇಲಾಖೆಯ ನೇಮಕಾತಿ ವಿಭಾಗದಲ್ಲಿದ್ದ ಅವರು ಅಲ್ಲಿಂದಲೂ ವರ್ಗಾವಣೆಯಾಗಿದ್ದರು.

ಕೇಂದ್ರ ಸಚಿವರ ಬೆವರಿಳಿಸಿದ್ದ ಕನ್ನಡಿಗ ‘ಸಿಂಗಂ’ಗೆ ಕೇರಳ ಸರ್ಕಾರ ಪ್ರಶಂಸೆ!