ಯುವ ಪೊಲೀಸ್ ಅಧಿಕಾರಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸ್ಥಿತಿ ತೀವ್ರ ಚಿಂತಾಜನಕವಾಗಿದೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾನ್ಪುರ : ಪೊಲೀಸ್ ಅಧಿಕಾರಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸುರೇಂದ್ರ ಕುಮಾರ್ ದಾಸ್ ಎನ್ನುವ ಈ ಯುವ ಅಧಿಕಾರಿ ಪ್ರಜ್ಞಾಹೀನರಾಗಿದ್ದು ಈ ವೇಳೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯರಾದ ಡಾ. ಅಗರ್ವಾಲ್ ಹೇಳಿದ್ದಾರೆ. 30 ವರ್ಷದ ಐಪಿಎಸ್ ಅಧಿಕಾರಿಯನ್ನ ಮುಂಜಾನೆ 6 ಗಂಟೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಕ್ಷಣವೇ ಚಿಕಿತ್ಸೆ ಆರಂಭಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಈಸ್ಟ್ ಕಾನ್ಪುರ ಜಿಲ್ಲೆಯಲ್ಲಿ ಎಸ್ ಪಿಯಾಗಿ ಸುರೇಂದ್ರ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದರು. ಮೆಕಾನಿಕಲ್ ಎಂಜಿನಿಯರ್ ಪದವೀಧರರಾದ ಸುರೇಂದ್ರ ಕುಮಾರ್ 2014ರಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದ್ದರು.
(ಫೊಟೊ ಕೃಪೆ ಹಿಂದೂಸ್ಥಾನ್ ಟೈಮ್ಸ್)
