ಕರ್ಕರೆ ಕುರಿತಾದ ಸಾಧ್ವಿ ಹೇಳಿಕೆಯನ್ನು ಖಂಡಿಸಿದ ಐಪಿಎಸ್ ಅಧಿಕಾರಿಗಳ ಸಂಘ| ‘ಅಶೋಕ್ ಚಕ್ರ ಪ್ರಶಸ್ತಿ ವಿಜೇತ ಕರ್ಕರೆ ಬಲಿದಾನವನ್ನು ಅವಮಾನಿಸುವುದು ಸರಿಯಲ್ಲ’| ‘ಸಮವಸ್ತ್ರದಲ್ಲಿ ಹುತಾತ್ಮರಾದ ಅಧಿಕಾರಿಗೆ ಅವಮಾನ ಸಹಿಸಲ್ಲ’|
ನವದೆಹಲಿ(ಏ.19): ಮುಂಬೈ ದಾಳಿಯಲ್ಲಿ ಹುತಾತ್ಮರಾದ ATS ಮುಖ್ಯಸ್ಥ ಹೇಮಂತ ಕರ್ಕರೆ ಕುರಿತಾದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆಯನ್ನು ಭಾರತೀಯ ಐಪಿಎಸ್ ಸಂಘ ತೀವ್ರವಾಗಿ ಖಂಡಿಸಿದೆ.
ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆಯನ್ನು ಐಪಿಎಸ್ ಅಧಿಕಾರಿಗಳ ಸಂಘ ತೀವ್ರವಾಗಿ ಖಂಡಿಸಿದ್ದು, ಅಶೋಕ್ ಚಕ್ರ ಪ್ರಶಸ್ತಿ ವಿಜೇತ ಹೇಮಂತ್ ಕರ್ಕರೆ ಬಲಿದಾನವನ್ನು ತಮ್ಮ ಶಾಪ ಎಂದಿರುವುದು ತರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಸಮವಸ್ತ್ರದಲ್ಲಿ ಹುತಾತ್ಮರಾದ ಅಧಿಕಾರಿಯನ್ನು ಅವಮಾನ ಮಾಡಿದ ಅಭ್ಯರ್ಥಿಯ ಹೇಳಿಕೆಯನ್ನು ಖಂಡಿಸುವುದಾಗಿ ಐಪಿಎಸ್ ಅಧಿಕಾರಿಗಳ ಸಂಘ ಸ್ಪಷ್ಟಪಡಿಸಿದೆ.
