ಮೊದಲೇ ಬೆಂಗಳೂರು ಸೇರಿದಂತೆ ನಗರವಾಸಿಗಳು ವಾರದ ಕೊನೆಯಲ್ಲಿ ಪ್ರವಾಸ, ಊರು ಬಿಡುವುದು ಸಾಮಾನ್ಯ. ಆ ದಿನಗಳಲ್ಲಿ ಚುನಾವಣಾ ಆಯೋಗ ಮತದಾರರನ್ನು ಎಷ್ಟೆ ಓಲೈಸಿದರೂ ಮತಗಟ್ಟೆಗೆ ಆಗಮಿಸುವುದು ಕಡಿಮೆ
ಬೆಂಗಳೂರು(ಮಾ.27): ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಚುನಾವಣೆ ದಿನಾಂಕವನ್ನು ಇಂದು ಪ್ರಕಟಿಸಿದ್ದು ಮೇ.12ರಂದು ಏಕಹಂತದ ಚುನಾವಣೆ ನಡೆಯಲಿದ್ದು ಮೇ.15ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ನೀತಿ ಸಂಹಿತೆ ಕೂಡ ರಾಜ್ಯಾದ್ಯಂತ ಇಂದೇ ಜಾರಿಯಾಗಲಿದೆ.
ಮೇ.12ರಂದು ಚುನಾವಣೆ ನಡೆಯುವ ದಿನದಂತೆ ಐಪಿಎಲ್'ನ ಬೆಂಗಳೂರಿನಲ್ಲಿ ರಾತ್ರಿ 8 ಗಂಟೆಗೆ ಡೆಲ್ಲಿ ವಿರುದ್ಧ ಆರ್'ಸಿ'ಬಿ ಪಂದ್ಯ ನಡೆಯಲಿದೆ. ಅಂದು 4 ಗಂಟೆಗೆ ಇಂಧೂರ್'ನಲ್ಲಿ ಪಂಜಾಬ್ ಹಾಗೂ ಕೋಲ್ಕತ್ತಾ ಪಂದ್ಯ ನಡೆಯಲಿದೆ. ಐಪಿಎಲ್ ಪಂದ್ಯಗಳು ನಡೆಯುವ ದಿನವೇ ಚುನಾವಣೆ ನಡೆಯುವುದರಿಂದ ಮತ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.
ಮೊದಲೇ ಬೆಂಗಳೂರು ಸೇರಿದಂತೆ ನಗರವಾಸಿಗಳು ವಾರದ ಕೊನೆಯಲ್ಲಿ ಪ್ರವಾಸ, ಊರು ಬಿಡುವುದು ಸಾಮಾನ್ಯ. ಆ ದಿನಗಳಲ್ಲಿ ಚುನಾವಣಾ ಆಯೋಗ ಮತದಾರರನ್ನು ಎಷ್ಟೆ ಓಲೈಸಿದರೂ ಮತಗಟ್ಟೆಗೆ ಆಗಮಿಸುವುದು ಕಡಿಮೆ. ಐಪಿಎಲ್ ದಿನದ ಬದಲು ಬೇರೆ ದಿನ ಚುನಾವಣೆ ದಿನಾಂಕ ಪ್ರಕಟಿಸಿದ್ದರೆ ಮತದಾನದ ಸರಾಸರಿ ಪ್ರಮಾಣ ಹೆಚ್ಚಾಗುತ್ತಿತ್ತು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಆಯೋಗ ಕೂಡ ಹೆಚ್ಚು ಜಾಗೃತಿ ವಹಿಸಬೇಕಿತ್ತು ಎಂಬುದು ಹಲವರ ಪ್ರಶ್ನೆಯಾಗಿದೆ.

Last Updated 11, Apr 2018, 12:48 PM IST