ಚೆನ್ನೈ[ಮಾ.14]: ರಾಬರ್ಟ್ ವಾದ್ರಾ ಅವರ ತನಿಖೆ ನಡೆಸುವುದಕ್ಕೆ ಅಡ್ಡಿಯಿಲ್ಲ, ಆದರೆ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನೂ ತನಿಖೆಗೊಳಪಡಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಚುನಾವಣಾ ಪ್ರಚಾರದ ಅಂಗವಾಗಿ ನಗರದ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರ ಜೊತೆ ಬುಧವಾರ ಸಂವಾದ ನಡೆಸುತ್ತಿದ್ದಾಗ ಅವರಿಗೆ ತಮ್ಮ ಭಾವ ರಾಬರ್ಟ್ ವಾದ್ರಾ ಅವರ ಅಕ್ರಮ ವ್ಯವಹಾರಗಳ ಕುರಿತು ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ರಾಹುಲ್, ‘ಈ ಮಾತನ್ನು ಹೇಳುತ್ತಿರುವ ಮೊದಲ ವ್ಯಕ್ತಿ ನಾನು... ರಾಬರ್ಟ್ ವಾದ್ರಾ ಅವರನ್ನು ತನಿಖೆಗೊಳಪಡಿಸಿ. ಹಾಗೇ ಪ್ರಧಾನಿ ಮೋದಿಯವರನ್ನೂ ತನಿಖೆಗೊಳಪಡಿಸಿ. ಮೋದಿ ಒಬ್ಬ ಭ್ರಷ್ಟ ವ್ಯಕ್ತಿ. ಅವರು ರಫೇಲ್ ವ್ಯವಹಾರದಲ್ಲಿ ತಮ್ಮ ಸ್ನೇಹಿತರಿಗೆ ಲಾಭ ಮಾಡಿಕೊಡಲು ಸರ್ಕಾರದ ಮೂಲಕ ನಡೆಸಬೇಕಿದ್ದ ಚೌಕಾಸಿಯನ್ನು ಬೈಪಾಸ್ ಮಾಡಿ ಖಾಸಗಿಯಾಗಿ ಚೌಕಾಸಿ ವ್ಯವಹಾರ ನಡೆಸಿದ್ದರು’ ಎಂದು ಹೇಳಿದರು.

ಉಗ್ರನಿಗೆ ‘ಜೀ’ ಎಂದ ರಾಹುಲ್ ವಿರುದ್ಧ ದೇಶದ್ರೋಹ ಕೇಸ್!

ಜೈಷ್ ಉಗ್ರನನ್ನು ಮಸೂದ್ ಅಜರ್ ಜೀ ಎಂದು ಕರೆದು ವಿವಾದ ಸೃಷ್ಟಿಸಿದ್ದ ರಾಹುಲ್ ವಿರುದ್ಧ ರಾಜು ಮಹಾಂತಾ ಎನ್ನುವವರು ದೇಶದ್ರೋಹದ ಕೇಸು ದಾಖಲಿಸಿದ್ದಾರೆ. ಉಗ್ರನಿಗೆ ವಿಶೇಷ ಗೌರವ ನೀಡುವ ಮೂಲಕ ರಾಹುಲ್ ದೇಶ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಲಾಗಿದೆ.