ನವದೆಹಲಿ[ಜು.30]: ಲೋಕಸಭಾ ಚುನಾವಣಾ ಸಂದರ್ಭದಲ್ಲಿ PWD ಅಧಿಕರಿ ರೀನಾ ದ್ವಿವೇದಿ ಇಂಟರ್ನೆಟ್ ಸೆಲೆಬ್ರಿಟಿಯಾಗಿದ್ದರು. ಹಳದಿ ಸೀರೆಯುಟ್ಟುಕೊಂಡಿದ್ದ ಅವರ ಫೋಟೋಗಳು ಭಾರೀ ವೈರಲ್ ಆಗಿದ್ದವು. ಇವಿಎಂ ಮಶೀನ್ ಹಿಡಿದುಕೊಂಡು ಮತಗಟ್ಟೆಗೆ ಆಗಮಿಸುತ್ತಿದ್ದ ವೇಳೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದ ಫೋಟೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದರು. ಬಳಿಕ ಇವರು ಹಳದಿ ಸೀರೆಯ ಬೆಡಗಿ ಎಂದೇ ಫೇಮಸ್ ಆದರು. ಬಿಗ್ ಬಾಸ್ ಶೋಗೆ ಎಂಟ್ರಿ ಕೊಡುವ ಇಚ್ಛೆ ಇಟ್ಟುಕೊಂಡಿರುವ ರೀನಾ ವಿಡಿಯೋ ಒಂದು ಸದ್ಯ ಭಾರೀ ವೈರಲ್ ಆಗುತ್ತಿದೆ.

ಹಳದಿ ಸೀರೆಯುಟ್ಟು ಇವಿಎಂ ಹಿಡಿದಿದ್ದ ಅಧಿಕಾರಿ ವೈರಲ್!: ಯಾರು ಆ ಸುಂದರಿ?

ಹೌದು ಅಂದು ಹಳದಿ ಸೀರೆಯುಟ್ಟುಕೊಂಡು ಫೋಸ್ ಕೊಟ್ಟಿದ್ದ ರೀನಾ ಇಂದು ಹಸಿರು ವರ್ಣದ ಸೀರೆಯುಟ್ಟು ಸೊಂಟ ಬಳುಕಿಸಿದ್ದಾರೆ. ಹಿಂದಿ ಬಿಗ್ ಬಾಸ್ ಖ್ಯಾತಿಯ ಹರ್ಯಾಣ ಡಾನ್ಸರ್ ಸಪ್ನಾ ಚೌಧರಿ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿರುವ ರೀನಾ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಖುದ್ದು ರೀನಾ ದ್ವಿವೇದಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ರೀನಾರಿಗೆ ಅದಿತ ಹೆಸರಿನ ಓರ್ವ ಪುತ್ರನಿದ್ದಾನೆ, ಆತ 9ನೇ ತರಗತಿ ವಿದ್ಯಾರ್ಥಿ ಎಂಬುವುದು ಉಲ್ಲೇಖನೀಯ. 

ಹಳದಿ ಸೀರೆ ಚುನಾವಣಾಧಿಕಾರಿ: ಕರ್ತವ್ಯಕ್ಕೆ ಸೌಂದರ್ಯವೇ ಮಾರಿ?