ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

First Published 21, Jun 2018, 8:24 AM IST
International Yoga Day
Highlights

4ನೇ ಅಂತಾರಾಷ್ಟ್ರೀಯ ಯೋಗಾ ದಿನವನ್ನು ಇಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡೆಹ್ರಾಡೂನ್ ನಲ್ಲಿ ಯೋಗ ಮಾಡಿದ್ದಾರೆ. ಇನ್ನು ವಿವಿಧೆಡೆ ರಾಜಕೀಯ ಸೇರಿದಂತೆ ವಿವಿಧ ವಲಯಗಳ ನಾಯಕರು, ಸೆಲೆಬ್ರಿಟಿಗಳು  ಸಾರ್ವಜನಿಕವಾಗಿ ಏರ್ಪಡಿಸಿದ ಯೋಗ ದಿನಾಚರಣೆಯಲ್ಲಿ ಯೋಗ ಮಾಡಿದ್ದಾರೆ.

ಬೆಂಗಳೂರು :  4ನೇ ಅಂತಾರಾಷ್ಟ್ರೀಯ ಯೋಗಾ ದಿನವನ್ನು ಇಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡೆಹ್ರಾಡೂನ್ ನಲ್ಲಿ ಯೋಗ ಮಾಡಿದ್ದಾರೆ. ಇನ್ನು ವಿವಿಧೆಡೆ ರಾಜಕೀಯ ಸೇರಿದಂತೆ ವಿವಿಧ ವಲಯಗಳ ನಾಯಕರು, ಸೆಲೆಬ್ರಿಟಿಗಳು  ಸಾರ್ವಜನಿಕವಾಗಿ ಏರ್ಪಡಿಸಿದ ಯೋಗ ದಿನಾಚರಣೆಯಲ್ಲಿ ಯೋಗ ಮಾಡಿದ್ದಾರೆ.

ಇಂದು ಅಂತರರಾಷ್ಟ್ರೀಯ ಯೋಗ ದಿನ. ಭಾರತಕ್ಕೆ  ಒಟ್ಟು 177ಕ್ಕೂ ಹೆಚ್ಚು ರಾಷ್ಟ್ರಗಳು ಈ ಯೋಗ ದಿನಕ್ಕೆ  ಸಹಕರಿಸಿವೆ. ಈ ದಿನ ಯೋಗ ಪ್ರಾರಂಭಕ್ಕೆ ಅನೇಕ ವಿಶ್ವ ನಾಯಕರಿಂದ ಸಹಕಾರ ದೊರೆತಿದೆ.  ಅಮೇರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಚೀನ ಸೇರಿ, 177 ಕ್ಕೂ  ಹೆಚ್ಚಿನ ದೇಶಗಳು ಈ ಪ್ರಸ್ತಾವನೆಗೆ ತಮ್ಮ ಬೆಂಬಲವನ್ನು ಕೊಡುತ್ತಲಿದೆ. ಅವುಗಳಲ್ಲಿ 175 ದೇಶಗಳು ಈ ನಿರ್ಧಾರವನ್ನು ಪುರಸ್ಕರಿಸಿವೆ. ಇದರಲ್ಲಿ ಹಲವು ಮುಸ್ಲಿಂ ರಾಷ್ಟ್ರಗಳು ಕೂಡ ಯೋಗಕ್ಕೆ ಬೆಂಬಲ ನೀಡಿರುವುದು ವಿಶೇಷ.

loader