ಇಂದು ಅಂತರಾಷ್ಟ್ರೀಯ ಮಹಿಳಾ ದಿನ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದ 12 ಮಹಿಳೆಯರ ಬಗ್ಗೆ ಫೀಚರ್ ಮಾಡಿದೆ. ಆ 12 ಮಹಿಳೆಯರಲ್ಲಿ ನಮ್ಮ ಬೆಂಗಳೂರು ಮೂಲದ ಕನ್ನಡತಿ ಕಾವೇರಿ ಗೋಪಾಲಕೃಷ್ಣನ್ ಕೂಡಾ ಇದ್ದಾರೆ ಅನ್ನೋದು ಹೆಮ್ಮೆಯ ಸಂಗತಿ.
ಬೆಂಗಳೂರು (ಮಾ. 08): ಇಂದು ಅಂತರಾಷ್ಟ್ರೀಯ ಮಹಿಳಾ ದಿನ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದ 12 ಮಹಿಳೆಯರ ಬಗ್ಗೆ ಗೂಗಲ್ ಡೂಡಲ್ ಫೀಚರ್ ಮಾಡಿದೆ. ಆ 12 ಮಹಿಳೆಯರಲ್ಲಿ ನಮ್ಮ ಬೆಂಗಳೂರು ಮೂಲದ ಕನ್ನಡತಿ ಕಾವೇರಿ ಗೋಪಾಲಕೃಷ್ಣನ್ ಕೂಡಾ ಇದ್ದಾರೆ ಅನ್ನೋದು ಹೆಮ್ಮೆಯ ಸಂಗತಿ.
ಕಾವೇರಿ ಗೋಪಾಲಕೃಷ್ಣನ್ ಕಾಮಿಕ್ ಆರ್ಟಿಸ್ಟ್, ಇಲಸ್ಟ್ರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಪ್ ಅಂಡ್ ರೂಫ್ ಎನ್ನುವ ಕಾಮಿಕ್ ಒಂದನ್ನು ಬರೆದಿದ್ದಾರೆ. ಇದರಲ್ಲಿ ಹುಡುಗಿಯೊಬ್ಬಳು ಟೆರಸ್ ಮೇಲೆ ಕುಳಿತು ಪುಸ್ತಕವನ್ನು ಓದುತ್ತಿರುತ್ತಾಳೆ. ಪ್ರತಿಯೊಂದು ಪುಟ ಓದಿ ಮುಗಿಸಿದಾಗ ಆಕೆ ಸ್ವಲ್ಪ ಸ್ವಲ್ಪವೇ ದೊಡ್ಡವಳಾಗುತ್ತಾ ಹೋಗುತ್ತಾಳೆ. ಇದು ಆ ಕಾಮಿಕ್’ನ ತಿರುಳು.
ಇವರ ರೀತಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೂ ಗೂಗಲ್ ಡೂಡಲ್ ಪ್ರೋತ್ಸಾಹ ನೀಡಿದೆ. ಅದಕ್ಕಾಗಿಯೇ #HerStoryOurStory ಎನ್ನುವ ಹ್ಯಾಶ್’ಟ್ಯಾಗನ್ನು ಮಾಡಿದೆ.
