ನಾವು ನೀವು ಅಂದುಕೊಂಡಂತೆ ಹೊಸ ಕಂಪನಿಗಳು ನಷ್ಟ ಅನುಭವಿಸಲು ಬಂಡವಾಳ ಕೊರತೆ ಮೊದಲ ಕಾರಣವಲ್ಲ... ಮಾರುಕಟ್ಟೆಗೆ ಅತ್ಯಗತ್ಯವಲ್ಲದ ಪ್ರಾಡಕ್ಟ್'ಗಳನ್ನು ಬಿಡುಗಡೆ ಮಾಡುವುದು ಸ್ಟಾರ್ಟಪ್ ವೈಫಲ್ಯಕ್ಕೆ ಅತೀ ಪ್ರಮುಖ ಕಾರಣವೆಂದು ಸಿಬಿ ಇನ್ಸೈಟ್ಸ್'ನ ವರದಿ ಹೇಳುತ್ತದೆ.

ಬೆಂಗಳೂರು(ನ. 09): ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸ್ಟಾರ್ಟಪ್ ಕುರಿತ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಸ್ಟಾರ್ಟಪ್ ಇಂಡಿಯಾ ಯೋಜನೆ ಮೂಲಕ ನವೋದ್ಯಮಿಗಳಿಗೆ ಉತ್ಸಾಹ ತುಂಬುವ ಕೆಲಸವಾಗುತ್ತಿದೆ. ಹೊಸ ಹೊಸ ಸ್ಟಾರ್ಟಪ್'ಗಳು ಶುರುವಾಗುತ್ತಲೇ ಇವೆ. ಆದರೆ, ವಾಸ್ತವದ ದುರಂತವೆಂದರೆ ಹಾಗೆ ಶುರುವಾದ ಸ್ಟಾರ್ಟಪ್'ಗಳಲ್ಲಿ ಬಹುತೇಕವು ಹೇಳಹೆಸರಿಲ್ಲದಂತೇ ಕಳೆದುಹೋಗುತ್ತಿವೆಯಂತೆ. ಅಮೆರಿಕ ಮೂಲದ ಸಿಬಿ ಇನ್ಸೈಟ್ಸ್ ಎಂಬ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯೊಂದು ಸ್ಟಾರ್ಟಪ್ ವೈಫಲ್ಯಗಳ ಬಗ್ಗೆ ವಿಸ್ತೃತ ಸಂಶೋಧನೆ ನಡೆಸಿ ವರದಿ ಪ್ರಕಟ ಮಾಡಿದೆ. ಇನ್ನು, ಫೋರ್ಬ್ಸ್'ನಲ್ಲಿ ನೀಲ್ ಪಟೇಲ್ ಬರೆದಿರುವ ವರದಿಯೊಂದರ ಪ್ರಕಾರ, ಭಾರತದಲ್ಲಿ ಶುರುವಾಗುವ 10 ಸ್ಟಾರ್ಟಪ್'ಗಳಲ್ಲಿ 9 ಕಂಪನಿಗಳು ಹೆಚ್ಚು ದಿನ ಬಾಳಿಕೆಯಾಗುವುದಿಲ್ಲವಂತೆ.

ವಿಶ್ವಾದ್ಯಂತ ಸ್ಟಾರ್ಟಪ್'ಗಳ ವೈಫಲ್ಯದ ಸಮಸ್ಯೆ ಇದೆಯಾದರೂ ಭಾರತದಲ್ಲಿ ಇದು ಹೆಚ್ಚು ಎಂದು ಹೇಳುತ್ತೆ ಸಿಬಿ ಇನ್ಸೈಟ್ಸ್'ನ ರಿಪೋರ್ಟ್. ನವೋದ್ಯಮಗಳು ಯಾಕೆ ವಿಫಲವಾಗುತ್ತವೆ ಎಂಬುದಕ್ಕೆ ಇದು ಪ್ರಮುಖ ಕಾರಣಗಳ ಪಟ್ಟಿಯನ್ನೂ ಮಾಡಿದೆ. ನಾವು ನೀವು ಅಂದುಕೊಂಡಂತೆ ಹೊಸ ಕಂಪನಿಗಳು ನಷ್ಟ ಅನುಭವಿಸಲು ಬಂಡವಾಳ ಕೊರತೆ ಮೊದಲ ಕಾರಣವಲ್ಲ... ಮಾರುಕಟ್ಟೆಗೆ ಅತ್ಯಗತ್ಯವಲ್ಲದ ಪ್ರಾಡಕ್ಟ್'ಗಳನ್ನು ಬಿಡುಗಡೆ ಮಾಡುವುದು ಸ್ಟಾರ್ಟಪ್ ವೈಫಲ್ಯಕ್ಕೆ ಅತೀ ಪ್ರಮುಖ ಕಾರಣವೆಂದು ಸಿಬಿ ಇನ್ಸೈಟ್ಸ್'ನ ವರದಿ ಹೇಳುತ್ತದೆ.

ಹೊಸ ಸ್ಟಾರ್ಟಪ್'ಗಳ ವೈಫಲ್ಯಕ್ಕೆ ಕಾರಣಗಳು: 

ಮಾರುಕಟ್ಟೆಗೆ ಅಗತ್ಯತೆ ಇಲ್ಲದಿರುವುದು: 42%
ಬಂಡವಾಳ ಕೊರತೆ: 29%
ಸರಿಯಾದ ಸಿಬ್ಬಂದಿ ತಂಡ ಇಲ್ಲದಿರುವುದು: 23%
ಪ್ರಬಲ ಪ್ರತಿಸ್ಪರ್ಧಿಗಳು: 19%
ಬೆಲೆ: 18%
ಕಳಪೆ ಉತ್ಪನ್ನ: 17%
ಉತ್ತಮ ಬ್ಯುಸಿನೆಸ್ ಮಾಡೆಲ್: 17%
ಕಳಪೆ ಮಾರ್ಕೆಟಿಂಗ್: 14%
ಗ್ರಾಹಕರ ನಿರ್ಲಕ್ಷ್ಯ: 14%
ತಪ್ಪು ಸಂದರ್ಭದಲ್ಲಿ ಉತ್ಪನ್ನ ಬಿಡುಗಡೆ: 13%
ಲಕ್ಷ್ಯ ಕಳೆದುಕೊಳ್ಳುವುದು: 13%
ತಂಡದೊಳಗೆ ಅಥವಾ ಪಾಲುದಾರರ ಮಧ್ಯೆ ಬಿರುಕು: 13%
ಬದಲಾವಣೆ ಯಡವಟ್ಟು: 10%
ಆಸಕ್ತಿ ಕೊರತೆ: 9%
ತಪ್ಪು ಸ್ಥಳ: 9%
ಬಂಡವಾಳ ಹಾಕುವವರ ನಿರಾಸಕ್ತಿ: 8%
ಕಾನೂನು ಸಮಸ್ಯೆಗಳು: 8%
ನೆಟ್ವರ್ಕ್ ಕೊರತೆ ಅಥವಾ ಸಲಹೆಗಾರರಿಲ್ಲದಿರುವುದು: 8%
ಬಳಲಿಕೆ: 8%
ಬಿಡುಗಡೆಯೇ ಆಗದಿರುವುದು: 7%

(ಮಾಹಿತಿ ನೆರವು: CB Insights, Money Control)