ವಿಶ್ವ ವಿಖ್ಯಾತ ತಂತ್ರಜ್ಞಾನ ಕಂಪನಿ ‘ಇಂಟೆಲ್‌' ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 1100 ಕೋಟಿ ರು. ಬಂಡವಾಳದಲ್ಲಿ ಬೆಂಗಳೂರಿನಲ್ಲಿ ಅತ್ಯಾಧುನಿಕವಾದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಿದೆ.
ಬೆಂಗಳೂರು: ವಿಶ್ವ ವಿಖ್ಯಾತ ತಂತ್ರಜ್ಞಾನ ಕಂಪನಿ ‘ಇಂಟೆಲ್' ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 1100 ಕೋಟಿ ರು. ಬಂಡವಾಳದಲ್ಲಿ ಬೆಂಗಳೂರಿನಲ್ಲಿ ಅತ್ಯಾಧುನಿಕವಾದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಿದೆ.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಟೆಲ್ ಕಂಪನಿ ಬೆಂಗಳೂರಿನಲ್ಲಿ ಬಂಡವಾಳ ಹೂಡುತ್ತಿ ರುವ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿ ಹರ್ಷ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಮಾಹಿತಿ ಮತ್ತು ತಂತ್ರ ಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿರುವ ಪ್ರೊತ್ಸಾಹದಿಂದಾಗಿ ಇಂಟೆಲ್ ಕಂಪನಿ 1999ರಿಂದ ಕರ್ನಾಟಕವನ್ನು ತನ್ನ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡಿದೆ. ಈ ಸಂಸ್ಥೆ ಅಮೆರಿಕ ಹೊರತು ಪಡಿಸಿದರೆ ಇಲ್ಲಿ ಮಾತ್ರ ಅತಿ ಹೆಚ್ಚು ಬಂಡವಾಳ ಹೂಡಿಕೆ ಮಾಡಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
‘ಇನ್ವೆಸ್ಟ್ ಕರ್ನಾಟಕ'ದ ಮೂಲಕ ರಾಜ್ಯ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇದರಿಂದಾಗಿ ವಿವಿಧ ಕಂಪೆನಿಗಳು ರಾಜ್ಯ ದಲ್ಲಿ ಬಂಡವಾಳ ಹೂಡಿಕೆಗೆ ಮುಂದಾ ಗಿದ್ದು, ರಾಜ್ಯದಲ್ಲಿ ಉದ್ಯೋಗಾವಕಾಶ ಗಳು ಹೆಚ್ಚಾಗಲಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅತಿ ದೊಡ್ಡ ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿ ಹೊರ ಹೊಮ್ಮುತ್ತಿದೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಉದ್ಯೋಗ ಸೌಲಭ್ಯಗಳನ್ನು ಕಲ್ಪಿಸುವ ಎಲ್ಲಾ ಕಂಪನಿ ಗಳಿಗೆ ಅಗತ್ಯ ನೆರವು, ಸೌಲಭ್ಯಗಳ ಜತೆ ರಕ್ಷಣೆ ಒದಗಿಸಲಾಗಲು ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರದ ನೀತಿಗಳು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಕಲ್ಪಿಸಿವೆ ಎಂದು ಅವರು ಹೇಳಿದರು.
ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ದೇಶದ ಐಟಿ ಕ್ಷೇತ್ರದ ಅಭಿವೃದ್ಧಿಗೆ ಬೆಂಗಳೂರು ಸೂಕ್ತ ತಾಣವಾಗಿದೆ. ಈ ಕಂಪನಿಗಳು ಬಂಡವಾಳ ಹೂಡಿಕೆಯಿಂದ ದೇಶದ ಅಭಿವೃದ್ಧಿ ಪಥಕ್ಕೆ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ಇಂಟೆಲ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ನಿವೃತ್ತಿರಾಯ್, ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ಗುಪ್ತ, ನಿರ್ದೇಶಕಿ ಸಲ್ಮಾ ಮತ್ತಿತರು ಉಪಸ್ಥಿತರಿದ್ದರು.
