ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಅದೇನೆಂದು ಕೇಳಿದರೆ ನಿಮಗೆ ಆಶ್ಚರ್ಯವಾದೀತು!
ನವದೆಹಲಿ (ಜು.01): ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಅದೇನೆಂದು ಕೇಳಿದರೆ ನಿಮಗೆ ಆಶ್ಚರ್ಯವಾದೀತು. 2015 ರಲ್ಲಿ ಮಯನ್ಮಾರ್ ಗಡಿ ಪ್ರದೇಶದಲ್ಲಿ ಬಂಡು ವಿರೋಧಿ ಕಾರ್ಯಾಚರಣೆ ನಡೆದಂಥ ಸಂದರ್ಭದಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋರ್’ಗೆ ಟಿವಿ ನಿರೂಪಕರೊಬ್ಬರು ಅವಮಾನವಾಗುವಂತಹ ಪ್ರಶ್ನೆಯನ್ನು ಕೇಳಿದ್ದಾರೆ. ಅದನ್ನು ಸವಾಲಾಗಿ ಸ್ವೀಕರಿಸಿದ ರಾಜ್ಯವರ್ಧನ್ ಪಾಕ್ ವಿರುದ್ಧ ಸರ್ಜಿಕಲ್ ದಾಳಿ ಮಾಡಲು ಒಂದು ವರ್ಷದ ಹಿಂದೆಯೇ ಪ್ಲಾನ್ ಮಾಡಿದ್ದರು ಎಂದು ಮನೋಹರ್ ಪರ್ರಿಕರ್ ಹೇಳಿದ್ದಾರೆ.
ಪಣಜಿಯಲ್ಲಿಂದು ಕೈಗಾರಿಕೋದ್ಯಮಿಗಳ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಮಾತನಾಡುತ್ತಾ, ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಸರ್ಜಿಕಲ್ ದಾಳಿ ನಡೆಸಲು 15 ತಿಂಗಳ ಹಿಂದೆಯೇ ಪ್ಲಾನ್ ಮಾಡಲಾಗಿತ್ತು. 2015 ರಲ್ಲಿ ಮಣಿಪುರ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ಮಾಡಿ ನಮ್ಮ 18 ಸೈನಿಕರನ್ನು ಹತ್ಯೆ ಮಾಡಿದ್ದರು. ಈ ವಿಚಾರ ಕೇಳಿದಾಗ ನಾನು ಅವಮಾನಿತನಾದೆ. 200 ಜನರಿರುವ ಒಂದು ಸಣ್ಣ ಭಯೋತ್ಪಾದಕ ಸಂಘಟನೆ 18 ಜನ ಸೈನಿಕರನ್ನು ಕೊಂದಿದ್ದು ಭಾರತೀಯ ಸೇನೆಗೆ ಅವಮಾನದ ವಿಚಾರ. ಹಾಗಾಗಿ ನಾವು ಒಟ್ಟಿಗೆ ಕುಳಿತು ಸರ್ಜಿಕಲ್ ಸ್ಟ್ರೈಕ್ ಮಾಡಲು ಪ್ಲಾನ್ ಮಾಡಿದ್ವಿ ಎಂದಿದ್ದಾರೆ.
ನನಗೆ ಮಾಧ್ಯಮದವರು ಕೇಳಿದ ಒಂದು ಪ್ರಶ್ನೆ ಬಹಳ ನೋವಾಯಿತು. ಕೇಂದ್ರ ಸಚಿವ ರಾಜವರ್ಧನ್ ರಾಥೋರ್, ನಿವೃತ್ತ ಸೇನಾಧಿಕಾರಿಯೊಬ್ಬರು ಟಿವಿಯೊಂದರಲ್ಲಿ ಎಲ್ಲಾ ರೀತಿಯ ಹುಡುಕು ಕಾರ್ಯಾಚರಣೆ ಬಗ್ಗೆ ವಿವರ ನೀಡುತ್ತಿದ್ದ ಸಂದರ್ಭದಲ್ಲಿ, ನಿರೂಪಕರೊಬ್ಬರು, ಪಾಶ್ಚಿಮಾತ್ಯ ದೇಶದ ಮೇಲೆ ಇದೇ ರೀತಿ ದಾಳಿ ನಡೆಸಲು ನಿಮಗೆ ಧೈರ್ಯ ಮತ್ತು ಸಾಮರ್ಥ್ಯವಿದೆಯೇ? ಎಂದು ಕೇಳಿರುವುದನ್ನು ಪರಿಕರ್ ನೆನೆಸಿಕೊಂಡರು.
ಪ್ರಶ್ನೆ ಕೇಳಿದ ನಿರೂಪಕ ಮತ್ತು ಯಾವ ಸಂದರ್ಭದಲ್ಲಿ ರಾತೋರ್ ಗೆ ಹಾಗೆ ಕೇಳಲಾಗಿತ್ತು ಎನ್ನುವುದನ್ನು ಪರ್ರಿಕರ್ ಬಹಿರಂಗಪಡಿಸಿಲ್ಲ.
