ವಿಧಾನಸೌಧದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.  ಶಕ್ತಿಸೌಧದಲ್ಲಿ ಅನಾಥವಾಗಿ ಬಾಬಾಸಾಹೇಬ್ ಅವರ ಭಾವಚಿತ್ರವು ಬಿದ್ದಿದೆ.

ಬೆಂಗಳೂರು (ಜ.1): ವಿಧಾನಸೌಧದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಶಕ್ತಿಸೌಧದಲ್ಲಿ ಅನಾಥವಾಗಿ ಬಾಬಾಸಾಹೇಬ್ ಅವರ ಭಾವಚಿತ್ರವು ಬಿದ್ದಿದೆ.

ವಿಧಾನಸೌಧದ ಕೊಠಡಿ ನವೀಕರಣದ ನಡುವೆ ಅಂಬೇಡ್ಕರ್ ಭಾವಚಿತ್ರವನ್ನು ಹಳೇ ಟಾರ್ಪಲ್ - ಕವರ್ ಗಳ ಜತೆ ಇಡಲಾಗಿದೆ. ವಿಧಾನಸೌಧದ ಪಶ್ಚಿಮ ದ್ವಾರದ ಕಾಂಪೌಂಡ್ ಪಕ್ಕದಲ್ಲಿ ಹಳೇ ಟೇಬಲ್ ಮೇಲೆ ಅಂಬೇಡ್ಕರ್ ಭಾವಚಿತ್ರವನ್ನು ಇರಿಸಿರುವುದು ಕಂಡು ಬಂದಿದೆ.

ಇದೇ ರೀತಿಯಾಗಿ ಇತ್ತೀಚೆಗಷ್ಟೇ 'ಬಿಜೆಪಿ ಕಚೇರಿಯ ಸ್ಟೋರ್ ರೂಂನಲ್ಲಿ ಅಂಬೇಡ್ಕರ್ ಭಾವಚಿತ್ರ' ಭಾರೀ ವಿವಾದ ಸೃಷ್ಟಿಸಿತ್ತು. ಸಂವಿಧಾನ ದಿನಾಚರಣೆಯ ವೇಳೆ ರಾಜ್ಯ ಸರ್ಕಾರ ನೀಡಿದ ಜಾಹೀರಾತಿನಲ್ಲಿ ಅಂಬೇಡ್ಕರ್ ಭಾವಚಿತ್ರ ಪ್ರಕಟಿಸದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಈಗ ವಿಧಾನಸೌಧದಲ್ಲಿ ಅಂಬೇಡ್ಕರ್ ಗೆ ಅವಮಾನವಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.