ಭಾರತಕ್ಕೆ ಸ್ವತಂತ್ರ ಸಿಕ್ಕ ದಿನವಾದ ಇಂದು ಮದ್ಯರಾತ್ರಿ ವಿಜಯಪುರದ ಶಿವಾಜಿ ಸರ್ಕಲ್'ನಲ್ಲಿ ಧ್ವಜಾರೋಹಣ ನಡೆಸಲಾಯಿತು. ಆದರೆ ಧ್ವಜಾರೋಹಣದ ವೇಳೆ ಆಯೋಜಕರಿಂದ ಮಹಾ ಯಡವಟ್ಟು ನಡೆದಿದೆ. ಯಾಕಂದ್ರೆ ಧ್ವಜಾರೋಹಣ ನಡೆಸಿದ್ದ ವೇಳೆ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿದ್ದು ಅಪಮಾನ ಮಾಡಿದಂತಾಗಿದೆ.
ಬೆಂಗಳೂರು(ಆ.15): ಭಾರತಕ್ಕೆ ಸ್ವತಂತ್ರ ಸಿಕ್ಕ ದಿನವಾದ ಇಂದು ಮದ್ಯರಾತ್ರಿ ವಿಜಯಪುರದ ಶಿವಾಜಿ ಸರ್ಕಲ್'ನಲ್ಲಿ ಧ್ವಜಾರೋಹಣ ನಡೆಸಲಾಯಿತು. ಆದರೆ ಧ್ವಜಾರೋಹಣದ ವೇಳೆ ಆಯೋಜಕರಿಂದ ಮಹಾ ಯಡವಟ್ಟು ನಡೆದಿದೆ. ಯಾಕಂದ್ರೆ ಧ್ವಜಾರೋಹಣ ನಡೆಸಿದ್ದ ವೇಳೆ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿದ್ದು ಅಪಮಾನ ಮಾಡಿದಂತಾಗಿದೆ.
ಜಿಟಜಿಟಿ ಮಳೆ ಸುರಿಯುತ್ತಿದ್ದರೂ ಸಹ ಅಖಿಲ ಭಾರತ ವಿದ್ಯಾರ್ಥಿ ಪರಿಷತ್'ನಿಂದ ಧ್ವಜಾರೋಹಣ ನಡೆಸಲಾಯಿತು. ಮಧ್ಯರಾತ್ರಿ ಸ್ವಾತಂತ್ರ್ಯ ಸಿಕ್ಕಿದ್ದರಿಂದ ದೇಶಭಕ್ತರೆಲ್ಲ ಸೇರಿ ಇಲ್ಲಿನ ಶಿವಾಜಿ ಸರ್ಕಲ್ ನಲ್ಲಿ ಪ್ರತೀ ವರ್ಷ ರಾತ್ರಿ 12ಗಂಟೆಗೆ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಧ್ವಜವನ್ನು ಕಟ್ಟುವಾಗಲೇ ಸರಿಯಾಗಿ ಪರಿಶೀಲನೆ ನಡೆಸದಿರುವುದರಿಂದ ಯಡವಟ್ಟು ನಡೆದಿದೆ.
ಹೀಗಾಗಿ ದೇಶಾಭಿಮಾನಕ್ಕೆ ಧ್ವಜಾರೋಹಣ ನಡೆಸಿದ್ರೂ ಅಚಾತುರ್ಯದಿಂದಾಗಿ ಧ್ವಜ ಉಲ್ಟಾ ಹಾರಿದ್ದು ಮಾತ್ರ ರಾಷ್ಟ್ರಕ್ಕೆ ಮಾಡಿದ ಅಪಮಾನವಾಗಿದೆ.
