‘ಭಾರತ್ ಮಾತಾ ಕೀ ಜೈ, ಹಿಂದೂಸ್ಥಾನ್ ಜಿಂದಾಬಾದ್..’| ಯೋಧರ ತುಕಡಿ ಕಂಡು ಮುಗಿಲು ಸೀಳಿದ ಪುಟಾಣಿಗಳ ಘೋಷಣೆ| ಸೈನಿಕರ ಮನೋಬಲ ಹೆಚ್ಚಿಸಿದ ಪುಟಾಣಿಗಳ ವಿಡಿಯೋ ವೈರಲ್| ವಿಡಿಯೋ ಶೇರ್ ಮಾಡಿದ ಬಿಜೆಪಿ ನಾಯಕ, ಮೇಜರ್(ನಿವೃತ್ತ)ಸುರೇಂಧ್ರ ಪೂನಿಯಾ|
ನವದೆಹಲಿ(ಏ.17): 2019ರ ಲೋಕಸಭೆ ಚುನವಣೆಗೆ ಸೇನೆ ಮತ್ತು ಸೈನಿಕರು ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರವಾಗಿದೆ. ಕೆಲವರು ಸೇನೆ ಮತ್ತು ಸೈನಿಕರ ಪರ ಧ್ವನಿ ಎತ್ತಿದರೆ. ಇನ್ನೂ ಕೆಲವರು ದಾಳಿಯ ಸಾಕ್ಷಿ ಕೊಡಿ ಅಂತಾ ಕೇಳುತ್ತಾ ಅವಮಾನಿಸುತ್ತಿದ್ದಾರೆ.
ಆದರೆ ಇವರೆಲ್ಲರಿಗೆ ಪಾಠ ಕಲಿಸಲು ದೇಶದ ಪುಟಾಣಿಗಳ ವಿಡಿಯೋ ಒಂದೇ ಸಾಕು. ಸೈನಿಕರ ತುಕಡಿಯೊಂದು ರಸ್ತೆಯಲ್ಲಿ ಹಾದು ಹೋಗುವಾಗ ಚಿಕ್ಕ ಮಕ್ಕಳ ಗುಂಪೊಂದು ಸೆಣಿಕರಿಗೆ ನೈತಿಕ ಬಂಬಲ ಸೂಚಿಸಿದ ಹೃದಯಸ್ಪರ್ಶಿ ವಿಡಿಯೋ ಇದಾಗಿದೆ.
"
ಸೈನಿಕರ ತುಕಡಿಯೊಂದು ರಸ್ತೆಯಲ್ಲಿ ಹಾದು ಹೋಗುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಚಿಕ್ಕ ಮಕ್ಕಳ ಗುಂಪೊಂದು ಭಾರತ್ ಮಾತಾ ಕೀ ಜೈ, ಹಿಂದೂಸ್ಥಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಿದೆ.
ಇದಕ್ಕೆ ಮುಗುಳ್ನಗುತ್ತಲೇ ಉತ್ತರಿಸಿರುವ ಸೈನಿಕರು ಮಕ್ಕಳ ಘೋಷಣೆಗೆ ಧ್ವನಿಯಾಗಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ನಾಯಕ, ಮೇಜರ್(ನಿವೃತ್ತ)ಸುರೇಂಧ್ರ ಪೂನಿಯಾ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಶೇರ್ ಮಾಡಿದ್ದಾರೆ.
