ಬಿಜೆಪಿಯ ಅಶ್ವಮೇಧಯಾಗವನ್ನು  ಕಟ್ಟಿಹಾಕೋಕೆ  ಜೆಡಿಎಸ್​ ನಿಂದ ಮಾತ್ರ ಸಾಧ್ಯ.

ಬೆಂಗಳೂರು(ಮಾ.13):ಉತ್ತರ ಪ್ರದೇಶ ಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿಗೆ ಕುಮಾರಸ್ವಾಮಿ ಟಾಂಗ್​ ಕೊಟ್ಟಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಬಿಜೆಪಿಯ ಅಶ್ವಮೇಧಯಾಗವನ್ನು ಕಟ್ಟಿಹಾಕೋಕೆ ಜೆಡಿಎಸ್​ ನಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿಯ ಅಶ್ವಮೇಧ ಯಾಗ ಕಟ್ಟಿಹಾಕೋಕೆ ಕಾಂಗ್ರೆಸ್​'ನಿಂದ ಅದು ಸಾಧ್ಯವೇ ಇಲ್ಲ. ಅದು ಏನಿದ್ರು ಜೆಡಿಎಸ್​ ನಿಂದ ಮಾತ್ರ ಸಾಧ್ಯ ಅಂತ ಕುಮಾರಸ್ವಾಮಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಮುಖಂಡರಿಗೆ ಟಾಂಗ್​ ನೀಡಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದಲ್ಲೂ ಜೆಡಿಎಸ್​ಗೆ ಬೇಡಿಕೆ ಹೆಚ್ಚಾಗಿದೆ ಅಂತ ಹೇಳಿದರು.

ಯುಪಿ ಗೆಲುವಿನ ತಂತ್ರ ಅನುಸರಿಸಿದ ಕುಮಾರಣ್ಣ

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಳಗೊಂಡು 10 ಸಾವಿರ ವ್ಯಾಟ್ಸಪ್ ಗ್ರೂಪ್'ಗಳನ್ನು ರಚಿಸಲಾಗಿತ್ತು. ಈಗ ಅದೇ ರೀತಿಯ ತಂತ್ರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮುಂದಾಗಿದ್ದಾರೆ.

ಸಮಾಜಿಕ ಜಾಲತಾಣಗಳ ಮೂಲಕ ಜನರ ಜೊತೆ ಸಂಪರ್ಕ ವಿರುವ ಸಲುವಾಗಿ 'ನಮ್ಮ‌ ಕುಮಾರಣ್ಣ’ ವೆಬ್​​​​​ಸೈಟ್​​ಗೆ ಹೆಚ್ಡಿಕೆ ಚಾಲನೆ ನೀಡಿದರು. ವೆಟ್​​​ಸೈಟ್ ಮೂಲಕ ಜನರ ಅಹವಾಲು ಸ್ವೀಕರಿಸಿ, ಪ್ರತಿದಿನ 4 ಗಂಟೆಗಳ ಕಾಲ ಅವರೊಂದಿಗೆ ಚರ್ಚೆ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ.

'ನಮ್ಮ‌ಕುಮಾರಣ್ಣ' ವೆಬ್'ಸೈಟ್, ಫೇಸ್'ಬುಕ್, ಟ್ವಿಟರ್ ಮೂಲಕ ಜನರ ಜೊತೆ ನೇರ ಸಂಪರ್ಕ ಸಾಧಿಸುತ್ತೇನೆ. ಸಭೆ ಸಮಾರಂಭಗಳಲ್ಲಿ ಮಾಡುವ ಭಾಷಣ ಸಹ ಈ ವೆಬ್'ಸೈಟ್'ಗೆ ಅಪ್'ಲೋಡ್ ಮಾಡುತ್ತೇನೆ.ಯಾರೂ ಬೇಕಾದರೂ ಇದರಿಂದ ನನ್ನ ಸಂಪರ್ಕ ಸಾಧಿಸಬಹುದು. ತಮ್ಮ ಸಮಸ್ಯೆ,ಚರ್ಚೆಗಳನ್ನು ಮಾಡಬಹುದು

ಜನರು ಈ ಪೋರ್ಟಲ್ ಮೂಲಕ ನನ್ನ ಜೊತೆ ಚರ್ಚಿಸಬಹುದು. ಜೆಡಿಎಸ್ ಅಧಿಕಾರಕ್ಕೆ ತರುವ ಗುರಿ ನನ್ನದು. ಹೀಗಾಗಿ ನೂತನ ವೆಬ್ ತಾಣಕ್ಕೆ ಚಾಲನೆ ನೀಡಿದ್ದೇವೆ. ಮಾದ್ಯಮಗಳ ಜೊತೆಯೂ ನಿರಂತರ ಸಂಪರ್ಕ ಹೊಂದಿರುತ್ತೇವೆ. ಇನ್ನೊಬ್ಬರನ್ನು ಟೀಕಿಸೋಕೆ ನಾನು ಈ ವೆಬ್ ಸೈಟ್ ಬಳಸುವುದಿಲ್ಲ. ನನ್ನ ಮುನ್ನೋಟದ ಬಗ್ಗೆ ಮಾತ್ರ ಟ್ವೀಟ್ ಮಾಡ್ತೆನೆ' ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿ ಇದ್ದಾಗ ನಡೆದ ಹಾದಿಯೆ ಬೇರೆ ಇತ್ತು. ಚಾಮರಾಜ ನಗರದಲ್ಲಿ ಆಗ ಗ್ರಾಮ ವಾಸ್ತವ್ಯ ಮಾಡಿದ್ದೆ. ಅಲ್ಲಿ ಮೂಲಭೂತ ಸೌಕರ್ಯಗಳೆ ಇರಲಿಲ್ಲ. ಅಲ್ಲಿಗೆ ಹೋಗುವ ಮುನ್ನ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮಾಡಲು ಸೂಚಿಸಿದ್ದೆ. ಈಗ ಅಲ್ಲಿನ ಪರಿಸ್ಥಿತಿ ಬೇರೆಯೇ ಇದೆ ಎಂದು ಹೇಳಿದರು.