Asianet Suvarna News Asianet Suvarna News

ಸ್ವಂತ ದುಡ್ಡಲ್ಲಿ ಪ್ರತಿದಿನ 100 ಜನರಿಗೆ ಊಟ ಹಾಕುವ ಪುಣ್ಯಾತ್ಮ ಎಲ್ಲಿದ್ದಾರೆ?

ಭಿಕ್ಷುಕರು ಭಿಕ್ಷೆ ಕೇಳಿದರೆ 5 ರೂಪಾಯಿ ಹಾಕಲು ಹಿಂದೆ ಮುಂದೆ ನೀಡಲು ಹಿಂದೆ ಮುಂದೆ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಇಲ್ಲೊಬ್ಬ ಪುಣ್ಯಾತ್ಮ ಪ್ರತಿದಿನ 100 ಮಂದಿಗೆ ಊಟ ಹಾಕುತ್ತಾರೆ. ಅವರ ಯೋಗ ಕ್ಷೇಮ ವಿಚಾರಿಸಿಕೊಳ್ಳುತ್ತಾರೆ.

Inspirational; Tamil Nadu man feeds 100 people every day

ಚೆನ್ನೈ(ಜು.3]   ತಮಿಳುನಾಡಿನ ತಿರುಚಿರಾಪಳ್ಳಿಯ ಭೀಮಾ ನಗರ ನಿವಾಸಿ ಭಾರತಿ ಎಂಬುವರು ಅನ್ನ  ದಾಸೋಹವನ್ನು ನಡೆಸಿಕೊಂಡು ಬಂದಿದ್ದಾರೆ. 100 ಮಂದಿ ನಿರ್ಗತಿಕರಿಗೆ ಪ್ರತಿದಿನ ಹೊಟ್ಟೆತುಂಬ ಊಟ ಹಾಕುತ್ತಾರೆ.

ಪ್ರತಿ ದಿನ ಮಧ್ಯಾಹ್ನ ಅವರ ಮನೆಯ ಹೊರಗೆ ಹಿರಿಯ ನಾಗರಿಕರು, ಅಂಗವಿಕಲರು ಊಟಕ್ಕೆ ಸಾಲು ಹಚ್ಚಿ ನಿಂತಿರುತ್ತಾರೆ.  ದಿನಸಿ ಅಂಗಡಿ ನಡೆಸುವ ಭಾರತಿ ಮಧ್ಯಾಹ್ನ 12 ಗಂಟೆಗೆ ಮನೆಗೆ ಬಂದು ಅಡುಗೆ ಕೆಲಸ ಆರಂಭ ಮಾಡುತ್ತಾರೆ. ಗುಣಮಟ್ಟದ ಅಕ್ಕಿಯಿಂದ ತಯಾರಿಸಿದ ಅನ್ನ, ಒಂದು ಪೂರಿ, ರಸಂ, ಸಾಂಬಾರು ಸಹಿತವಾದ ಊಟವನ್ನು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ನೀಡುತ್ತಾರೆ.

ಬಡವರು ಮತ್ತು ನಿರ್ಗತಿಕರೊಗೆ ಮೊದಲಿನಿಂದಲೂ ಏನಾದರೂ ಸಹಾಯ ಮಾಡಬೇಕು ಎಂದು ಮನಸ್ಸು ಹೇಳುತ್ತಲೇ ಇತ್ತು. 2004ರಲ್ಲಿ ಇದಕ್ಕೆ ಕಾಲ ಕೂಡಿ ಬಂತು. ಅಲ್ಲಿನಿಂದ ಇಲ್ಲಿಯವರೆಗೆ ಅನ್ನ ದಾಸೋಹ ನಡೆಸಿಕೊಂಡು ಬಂದಿದ್ದೇನೆ ಎಂದು ಭಾರತಿ ಹೇಳುತ್ತಾರೆ.

Follow Us:
Download App:
  • android
  • ios