ಕೇಂದ್ರ ಸರ್ಕಾರವು ಸಂವೇದನೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಜಿಎಸ್ಟಿಯಲ್ಲಿರುವ ‘ಅಂಗವೈಕಲ್ಯ ತೆರಿಗೆ’ಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಅಂಗವೈಕಲ್ಯ ತೆರಿಗೆ’ಯಿಂದ ಲಕ್ಷಾಂತರ ಅಂಗವಿಕಲರು ಇನ್ನಷ್ಟು ಕಷ್ಟಪಡುವಂತಾಗುತ್ತದೆ ಎಂದಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರವು ಸಂವೇದನೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಜಿಎಸ್ಟಿಯಲ್ಲಿರುವ ‘ಅಂಗವೈಕಲ್ಯ ತೆರಿಗೆ’ಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಅಂಗವೈಕಲ್ಯ ತೆರಿಗೆ’ಯಿಂದ ಲಕ್ಷಾಂತರ ಅಂಗವಿಕಲರು ಇನ್ನಷ್ಟು ಕಷ್ಟಪಡುವಂತಾಗುತ್ತದೆ ಎಂದಿದ್ದಾರೆ.
ವ್ಹೀಲ್ ಚೇರ್, ಬ್ರೀಲ್ ಟೈಪ್’ರೈಟರ್’ಗಳ ಮೇಲೆ ಜಿಎಸ್’ಟಿ ವಿಧಿಸಿ ಸರ್ಕಾರವು ದುರ್ಬಲರ ವಿಚಾರದಲ್ಲಿ ಸಂವೇದನೆಯನ್ನು ಕಳೆದುಕೊಂಡಿದೆಯೆಂದು ಇನ್ನೊಮ್ಮೆ ಸಾಬೀತುಪಡಿಸಿದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಅಂಗವಿಕಲರು ಬಳಸುವ ವ್ಹೀಲ್ ಚೇರ್, ಬ್ರೈಲ್ ಟೈಪ್’ರೈಟರ್, ಬ್ರೈಲ್ ಹಾಳೆಗಳು, ಶ್ರವಣ ಸಾಧನಗಳು ಮುಂತಾದವುಗಳ ಮೇಲೆ ಕೇಂದ್ರ ಸರ್ಕಾರವು ಶೇ.5 ರಿಂದ ಶೇ.18ರವರೆಗೆ ಜಿಎಸ್’ಟಿಯನ್ನು ವಿಧಿಸಿದೆ.
ಜಿಎಸ್ಟಿ ಜಾರಿಯಾಗುವ ಮುಂಚೆ ಅಂಗವಿಕಲರು ಬಳಸುವ ಸಾಧನಗಳಿಗೆ ಯಾವುದೇ ರೀತಿಯ ಕಸ್ಟಮ್ಸ್ ಮತ್ತು ಅಬಕಾರಿ ತೆರಿಗೆಗಳು ಅನ್ವಯವಾಗುತ್ತಿರಲಿಲ್ಲ.
