ನವದೆಹಲಿ (ಸೆ.19): ದೆಹಲಿ ಉಪ-ಮುಖ್ಯಮಂತ್ರಿ ಮನೀಶ್ ಸಿಸೊದಿಯಾ ಮೇಲೆ ವ್ಯಕ್ತಿಯೊಬ್ಬ ಮಸಿ ಎಸೆದ ಘಟನೆ ಇಂದು ನಡೆದಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಅಧಿಕರತ ನಿವಾಸದಲ್ಲಿ ಭೇಟಿಯಾಗಿ ಹೊರ ಬಂದು ಪತ್ರಕರ್ತರನ್ನುದ್ದೆಶಿಸಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಸಿಸೋದಿಯಾ ಮೇಲೆ ಮಸಿ ಎಸೆದ ವ್ಯಕ್ತಿಯನ್ನು ಬ್ರಿಜೇಶ್ ಶುಕ್ಲಾ ಎಮದು ಗುರುತಿಸಲಾಗಿದೆ.
ದೆಹಲಿಯಲ್ಲಿ ಮಾರಣಾಂತಿಕ ಚಿಕನ್ ಗುನ್ಯಾ ಹಾಗು ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಸಿಸೋದಿಯಾ ಫಿನ್’ಲ್ಯಾಂಡ್’ಗೆ ಪ್ರವಾಸ ಕೈಗೊಂಡಿದ್ದ ಕ್ರಮ ವ್ಯಾಪಕ ಟೀಕೆಗೊಳಗಾಗಿತ್ತು.
ಪ್ರವಾಸವನ್ನು ತಕ್ಷಣ ಮೊಟಕುಗೊಳಿಸಿ ದೆಹಲಿಗೆ ವಾಪಸಾಗುವಂತೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸಿಸೊದಿಯಾಗೆ ಸೂಚಿಸಿದ್ದರು.
ಈ ವಿಚಾರವಾಗಿ ಅವರು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
