ಹಾಸನದಲ್ಲೊಂದು ಅಮಾನವೀಯ ಘಟನೆ

First Published 6, Apr 2018, 10:46 AM IST
Inhuman Incident in Hassana
Highlights

ಇಲ್ಲೊಂದು ಅಮಾನವೀಯ ಘಟನೆ ನಡೆದಿದೆ.  ವ್ಯಕ್ತಿಯೊಬ್ಬ ದಂಪತಿ ಮೇಲೆ  ದಾಳಿ ಮಾಡಿ ಮನಸೋ ಇಚ್ಚೆ ಥಳಿಸಿದ್ದಾನೆ. ಗಂಡನ ರಕ್ಷಿಸಿಕೊಳ್ಳಲು ಬಂದ ಪತ್ನಿಯ ಮೇಲೆಯೂ  ಹಲ್ಲೆ ನಡೆಸಿದ್ದಾನೆ. 

ಹಾಸನ  (ಏ. 06): ಇಲ್ಲೊಂದು ಅಮಾನವೀಯ ಘಟನೆ ನಡೆದಿದೆ.  ವ್ಯಕ್ತಿಯೊಬ್ಬ ದಂಪತಿ ಮೇಲೆ  ದಾಳಿ ಮಾಡಿ ಮನಸೋ ಇಚ್ಚೆ ಥಳಿಸಿದ್ದಾನೆ. ಗಂಡನ ರಕ್ಷಿಸಿಕೊಳ್ಳಲು ಬಂದ ಪತ್ನಿಯ ಮೇಲೆಯೂ  ಹಲ್ಲೆ ನಡೆಸಿದ್ದಾನೆ. 

ನಗರದ ಪಾಂಡುರಂಗ ದೇವಸ್ಥಾನ ರಸ್ತೆಯ ಗರಡಿ ಸರ್ಕಲ್’ನಲ್ಲಿ ವ್ಯಕ್ತಿಯೊಬ್ಬ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಿದ್ದಾನೆ. ಮಾರ್ಚ್ 30 ರಂದು ಈ ಘಟನೆ ನಡೆದಿದೆ. ಅಂದು ಸಂಜೆ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನ ವಾಹನ ಅಲ್ಲೇ ಸರ್ಕಲ್ ನಲ್ಲಿದ್ದ ಉತ್ತರ ಪ್ರದೇಶ ಮೂಲದ ಪಾನೀಪುರಿ ಮಾರುವ ವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂತರ ಆ ಗಾಡಿ ರಸ್ತೆ ಮಧ್ಯೆ ನಿಲ್ಲಿಸಲಾಗಿದೆ ಎಂದು ದರ್ಪದಿಂದ ಆ ಅಮಾಯಕ ಪಾನಿಪುರಿ ವ್ಯಾಪಾರಿಯನ್ನು ರಸ್ತೆ ಮದ್ಯಕ್ಕೆಳೆದು ಹಿಗ್ಗಾ ಮುಗ್ಗಾ ಥಳಿಸಿದ್ದಾನೆ.  ವ್ಯಾಪಾರಿ ಮತ್ತು ಆತನ ಪತ್ನಿ ಕೈ ಮುಗಿದು ಕೇಳಿಕೊಂಡರೂ  ಅವನ ಮೇಲೆ ಎರಗಿ ಹೊಡೆಯುತ್ತಾನೆ.  ಅಲ್ಲೇ ನಿಂತಿದ್ದ ಹಲವು ಜನರು ಮೂಖರಂತೆ ನೋಡುತ್ತಾರೆಯೆ ಹೊರತು ಯಾರೂ ರಕ್ಷಣೆಗೆ ಬರುವುದಿಲ್ಲ. 

ಈ ಬಗ್ಗೆ ಹಾಸನ ಎಸ್ಪಿ ರಾಹುಲ್ ಕುಮಾರ್ ಗಮನಹರಿಸಿ ಪುಡಿರೌಡಿಗಳಿಗೆ ಪಾಠ ಕಲಿಸಬೇಕಿದೆ.

loader