'ಡಾಕ್ಟ್ರೇ ದಯವಿಟ್ಟು ನನಗೆ ಚಿಕಿತ್ಸೆ ನೀಡಿ, ನನ್ನನ್ನು ಅಡ್ಮಿಟ್​ ಮಾಡಿ' ಅಂತ ಅಂಗಲಾಚಿದರೂ  ವೈದ್ಯರು ಮಾನವೀಯತೆ ಮರೆತು ಅಮಾನವೀಯತೆ ಮರೆತ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು(ಫೆ.06): 'ಡಾಕ್ಟ್ರೇ ದಯವಿಟ್ಟು ನನಗೆ ಚಿಕಿತ್ಸೆ ನೀಡಿ, ನನ್ನನ್ನು ಅಡ್ಮಿಟ್​ ಮಾಡಿ' ಅಂತ ಅಂಗಲಾಚಿದರೂ ವೈದ್ಯರು ಮಾನವೀಯತೆ ಮರೆತು ಅಮಾನವೀಯತೆ ಮರೆತ ಘಟನೆ ತುಮಕೂರಿನಲ್ಲಿ ನಡೆದಿದೆ.

ಬೈಕ್​ ಅಪಘಾತದಲ್ಲಿ ಗಾಯಗೊಂಡಿದ್ದ ಕರಿಸಿದ್ದಯ್ಯ ಎಂಬ ವ್ಯಕ್ತಿ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆದರೆ ಇಲ್ಲೊಇ ಕೇವಲ ಪ್ರಾಥಮಿಕ ಚಿಕಿತ್ಸೆ ನೀಡಿದ್ದ ವೈದ್ಯರು, ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದ ಕರಿಸಿದ್ದಯ್ಯ, ಹೆಚ್ಚಿನ ಚಿಕಿತ್ಸೆ ನೀಡುವಂತೆ ವೈದ್ಯರನ್ನು ಗೋಗೆರೆದಿದ್ದಾನೆ.

ಆದರೆ ಈತ ಅದೆಷ್ಟು ಕೇಳಿಕೊಂಡರೂ ವೈದ್ಯರು ಮಾತ್ರ, ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಅಮಾನವೀಯತೆ ಮೆರೆದಿದ್ದಾರೆ.