ಇನ್ಫೋಸಿಸ್’ನ ಸ್ವತಂತ್ರ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ರವಿ ವೆಂಕಟೇಶನ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಇನ್ಫೋಸಿಸ್ ಮಂಡಳಿಯ ಸಹ-ಚೇರ್‌ಮೇನ್ ಆಗಿ ಆಯ್ಕೆಯಾಗಿದ್ದ ರವಿ
ನವದೆಹಲಿ [ಮೇ.11]: ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ ಕಂಪನಿಯ ಸ್ವತಂತ್ರ ನಿರ್ದೇಶಕರಾಗಿರುವ ರವಿ ವೆಂಕಟೇಶನ್ ಕಂಪನಿಯ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.
ಶುಕ್ರವಾರ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೀಡಿರುವ ಹೇಳಿಕೆಯಲ್ಲಿ ಇನ್ಫೋಸಿಸ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಸ್ವತಂತ್ರ ನಿರ್ದೇಶಕರಾಗಿದ್ದ ರವಿ ವೆಂಕಟೇಶನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಎಂದು ಹೇಳಿದೆ.
ಏಪ್ರಿಲ್ 2011ರಿಂದ ಇನ್ಫೋಸಿಸ್ ಮಂಡಳಿಯ ಸದಸ್ಯರಾಗಿರುವ ರವಿ ವೆಂಕಟೇಶನ್, ಹೊಸ ಅವಕಾಶಗಳ ನಿರೀಕ್ಷೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆನ್ನಲಾಗಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ರವಿ ವೆಂಕಟೇಶನ್ ಅವರನ್ನು ಇನ್ಫೋಸಿಸ್ ಮಂಡಳಿಯ ಸಹ-ಅಧ್ಯಕ್ಷನಾಗಿ ನೇಮಿಸಲಾಗಿತ್ತು. ಆದರೆ ಆಗಸ್ಟ್ 2017ರಲ್ಲಿ ನಂದನ್ ನೀಲೆಕಣಿ ಇನ್ಪೋಸಿಸ್ ಅಧ್ಯಕ್ಷರಾಗಿ ನೇಮಕವಾದ ಬಳಿಕ ಅವರು ಆ ಸಹ-ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು.
