ಬೆಂಗಳೂರು :  ಪ್ರಸಿದ್ಧ ಇನ್ಫೋಸಿಸ್  ಸಂಸ್ಥೆ ಇದೀಗ  ಫ್ರೆಶರ್ಸ್ ಗಳಿಗೆ  ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ.  ಹೆಚ್ಚು ಸ್ಕಿಲ್ ಹೊಂದಿದ ಫ್ರೆಶರ್ಸ್ ಗೆ  ಭರ್ಜರಿ ವೇತನವನ್ನು ನೀಡಿ ನೇಮಿಸಿಕೊಳ್ಳಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ಜಾರಿ ಮಾಡಿದೆ. 

ಈ ಹಿಂದೆ ಆರಂಭಿಕ ವೇತನವನ್ನು 3.5 ಲಕ್ಷ ನೀಡಿ ನೇಮಿಸಿಕೊಳ್ಳುತ್ತಿತ್ತು. ಆದರೆ ಇದೀಗ 7 ರಿಂದ 8 ಲಕ್ಷದಷ್ಟು ಆರಂಭಿಕ ವೇತನವನ್ನು ನೀಡಿ ನೇಮಿಸಿಕೊಳ್ಳಲು ನಿರ್ಧರಿಸಿದೆ. 

ಹೆಚ್ಚಿನ ಪ್ರಮಾಣದಕೌಶಲ್ಯವನ್ನು ಹೊಂದಿದವರಿಗೆ ಈ  ಭರ್ಜರಿ ಅವಕಾಶ ಲಭ್ಯವಾಗಲಿದೆ. 

ಹೊಸ ರೀತಿಯ ಕೌಶಲ್ಯವನ್ನು ಹೊಂದಿದ ಉದ್ಯೋಗಿಗಳ ಆಯ್ಕೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲು ನಮ್ಮ ಉದ್ಯೋಗಿಗಳಿಗೂ ಕೂಡ ಹೇಳಲಾಗುತ್ತದೆ ಎಂದು ಎಚ್. ಆರ್ ಮುಖ್ಯಸ್ಥರು ಹೇಳಿದ್ದಾರೆ. 

ಇದೇ ರೀತಿ ಅನೇಕ ಸಾಫ್ಟ್ ವೇರ್ ಕಂಪನಿಗಳೂ ಕೂಡ ಇದೀಗ ಹೆಚ್ಚು ಹೆಚ್ಚು ಕೌಶಲ್ಯವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಇದೇ ರೀತಿಯ  ನೀತಿಯನ್ನು ಅಳವಡಿಸಿಕೊಳ್ಳುತ್ತಿವೆ.