ಯೋಜನಾ ಮಂಡಳಿ ಮುಖ್ಯಸ್ಥರಾಗಿ ನಾರಾಯಣ ಮೂರ್ತಿ?

Infosys co-founder NR Narayana Murthy may appoint as chief of Planning Commission
Highlights

ಯೋಜನಾ ಮಂಡಳಿಗೆ ಉತ್ತಮವಾದ ಟೀಮ್ ಮಾಡಬೇಕು ಅಂದುಕೊಂಡಿದ್ದೇನೆ. ಮೋದಿ ಬಂದ ನಂತರ ಪ್ಲಾನಿಂಗ್ ಕಮಿಷನ್ ಹೆಸರು ತೆಗೆದು ನೀತಿ ಆಯೋಗ ಎಂದು ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ಲಾನಿಂಗ್ ಕಮಿಷನ್ ಆಕ್ಟೀವ್ ಆಗಿ ಕೆಲಸ ಮಾಡಲಿಕ್ಕೆ ದೊಡ್ಡಮಟ್ಟದ ವಿಷನ್ ನನಗೆ ಬೇಕು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 

ಮಂಡ್ಯ (ಜೂ. 13):  ಕರ್ನಾಟಕ ಯೋಜನಾ ಮಂಡಳಿ ಮುಖ್ಯಸ್ಥರಾಗಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರನ್ನು ನೇಮಕ ಮಾಡಬೇಕು ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ.  

ಯೋಜನಾ ಮಂಡಳಿಗೆ ಉತ್ತಮವಾದ ಟೀಮ್ ಮಾಡಬೇಕು ಅಂದುಕೊಂಡಿದ್ದೇನೆ. ಮೋದಿ ಬಂದ ನಂತರ ಪ್ಲಾನಿಂಗ್ ಕಮಿಷನ್ ಹೆಸರು ತೆಗೆದು ನೀತಿ ಆಯೋಗ ಎಂದು ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ಲಾನಿಂಗ್ ಕಮಿಷನ್ ಆಕ್ಟೀವ್ ಆಗಿ ಕೆಲಸ ಮಾಡಲಿಕ್ಕೆ ದೊಡ್ಡಮಟ್ಟದ ವಿಷನ್ ನನಗೆ ಬೇಕು. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮಾಡಲು ಮುಂದಾಲೋಚನೆ, ದೂರದರ್ಶಿತ್ವ  ಇರುವ ವ್ಯಕ್ತಿಗಳು ಬೇಕು. ಯೋಜನಾ ಆಯೋಗ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಕೆಲವರನ್ನು ನಿಯುಕ್ತಿಗೊಳಿಸಬೇಕಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 
 

loader