ಭಾರಿ ಪ್ರಮಾಣದಲ್ಲಿ ವೇತನ ಹೆಚ್ಚಿಸಿಕೊಂಡ ಕಾರಣ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಬೆಂಗಳೂರು(ಜ.04): ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಇನ್ಫೋಸಿಸ್'ನ ಸಿಇಒ ಸಲೀಲ್ ಪರೇಖ್ ಅವರ ವೇತನ 2021ರ ವೇಳೆಗೆ ದುಪ್ಪಟ್ಟು ಆಗಲಿದೆ.

ಪ್ರಸ್ತುತ ವರ್ಷ ನಿಗದಿತ ವೇತನ, ಬೋನಸ್, ಪರಿಹಾರ ಹಣ ಸೇರಿದಂತೆ ಒಟ್ಟು 17.3 ಕೋಟಿ ಪಡೆಯಲಿದ್ದು, 2021ರ ವೇಳೆಗೆ ಅವರ ವೇತನ 35.25 ಕೋಟಿಗೆ ಏರಲಿದೆ. ಪ್ರವೀಣ್ ರಾವ್ ಅವರಿಂದ ಜನವರಿ 2 ರಂದು ಅಧಿಕಾರ ವಹಿಸಿಕೊಂಡ ಅವರು ಪ್ರತಿ ವರ್ಷ 16.25 ಕೋಟಿ ವೇತನ ಪಡೆಯಲಿದ್ದಾರೆ. ಈ ಹಣದಲ್ಲಿ 6.5 ನಿಗದಿತ ವೇತನ, ಬೊನಸ್ ಮುಂತಾದವುಗಳನ್ನು ಒಳಗೊಳ್ಳುತ್ತದೆ.

ವೇತನ, ಬೋನಸ್ ಹೆಚ್ಚಳ, ಮುಂತಾದ ಭತ್ಯೆ ಸೇರಿದಂತೆ ಮಾರ್ಚ್ 2019ರ ವೇಳೆಗೆ 19.25 ಕೋಟಿಗೆ ಏರಿಕೆಯಾದರೆ 2021 ಮಾರ್ಚ್ ಕೊನೆಯ ಅವಧಿಗೆ ವೇತನವು 35.25 ಕೋಟಿ ರೂ. ಆಗುತ್ತದೆ. ವಿಶಾಲ್ ಸಿಕ್ಕ ಅವರಿಗೆ ಹೋಲಿಸಿದರೆ ಪರೇಖ್ ಅವರದು ಅತೀ ಕಡಿಮೆ ವೇತನವಾಗಿದೆ.

ಸಿಕ್ಕ ಅವರು ವಾರ್ಷಿಕ 73.4 ಕೋಟಿ ವೇತನ ಪಡೆದಿದ್ದರು. ಭಾರಿ ಪ್ರಮಾಣದಲ್ಲಿ ವೇತನ ಹೆಚ್ಚಿಸಿಕೊಂಡ ಕಾರಣ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ವಿವಾದ ಹೆಚ್ಚಾದ ಕಾರಣ ಕಳೆದ ವರ್ಷದ ಆಗಸ್ಟ್'ನಲ್ಲಿ ಕಂಪನಿಗೆ ರಾಜೀನಾಮೆ ನೀಡಿದ್ದರು. ಟಾಟಾ, ವಿಪ್ರೋ, ಕಾಗ್ನಿ'ಜೆಂಟ್ ಸಿಇಒ'ಗಳಿಗೆ ಹೋಲಿಸಿದರೆ ಪರೇಖ್ ಸಂಬಳ ತೀರ ಕಡಿಮೆ.