ಈರುಳ್ಳಿ ಮತ್ತು ತರಕಾರಿ ಬೆಲೆ ಗಗನಕ್ಕೇರಿರುವ ಪರಿಣಾಮ ನವೆಂಬರ್ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧರಿತ ಹಣದುಬ್ಬರ ಮತ್ತೆ ಶೇ. 3.93ಕ್ಕೆ ಏರಿಕೆ ಕಂಡಿದೆ.

ನವದೆಹಲಿ: ಈರುಳ್ಳಿ ಮತ್ತು ತರಕಾರಿ ಬೆಲೆ ಗಗನಕ್ಕೇರಿರುವ ಪರಿಣಾಮ ನವೆಂಬರ್ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧರಿತ ಹಣದುಬ್ಬರ ಮತ್ತೆ ಶೇ. 3.93ಕ್ಕೆ ಏರಿಕೆ ಕಂಡಿದೆ.

ಇದು 8 ತಿಂಗಳ ಗರಿಷ್ಠ. ಅಕ್ಟೋಬರ್‌ನಲ್ಲಿ ಇದರ ಪ್ರಮಾಣ 3.59ರಷ್ಟಿತ್ತು. ಗ್ರಾಹಕ ಬೆಲೆ ಸೂಚ್ಯಂಕವನ್ನಾಧರಿಸಿದ ಚಿಲ್ಲರೆ ಹಣದುಬ್ಬರ ಬುಧವಾರ 15 ತಿಂಗಳಲ್ಲೇ ಅತ್ಯಧಿಕ ಪ್ರಮಾಣದ ಏರಿಕೆ ಕಂಡಿತ್ತು.

ಇದರ ಬೆನ್ನಲ್ಲೇ ಚಿಲ್ಲರೆ ಹಣದುಬ್ಬರ ಕೂಡ ಏರಿದೆ. ಕಳೆದ ತಿಂಗಳು ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಅದು ಶೇ. 178.19ರಷ್ಟು ಏರಿತ್ತು. ತರಕಾರಿ ಬೆಲೆ ಶೇ. 59.80ಕ್ಕೆ ಏರಿತ್ತು