ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಚಕ್ಕುಲಿ ಗಂಟಲಿಗೆ ಸಿಲುಕಿರುವುದರಿಂದ ಒಂದು ವರ್ಷದ ಮಗು ಸಾವನ್ನಪ್ಪಿದೆ. ಹೀಗಾಗಿ ಸ್ವಲ್ಪ ಎಚ್ಚರ ತಪ್ಪಿದರೂ ಮಗುವಿನ ಜೀವಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ಈ ಪುಟ್ಟ ಕಂದಮ್ಮ ಚಕ್ಕುಲಿ ತಿನ್ನುವಾಗ ಗಂಟಲಲ್ಲಿ ಸಿಲುಕಿ ಮಗು ಮೃತಪಟ್ಟಿದೆ.
ಮಂಗಳೂರು(ಅ.31): ಪೋಷಕರೇ ಹುಷಾರ್! ಮಕ್ಕಳಿಗೆ ಚಕ್ಕುಲಿ ತಿನ್ನಲು ನೀಡುವ ಮುನ್ನ ಇತ್ತ ಕೊಂಚ ಗಮನ ನೀಡಿ. ಮಂಗಳೂರಿನಲ್ಲಿ ಚಕ್ಕುಲಿ ತಿನ್ನುವಾಗ ಉಸಿರುಗಟ್ಟಿ ಮಗುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಚಕ್ಕುಲಿ ಗಂಟಲಿಗೆ ಸಿಲುಕಿರುವುದರಿಂದ ಒಂದು ವರ್ಷದ ಮಗು ಸಾವನ್ನಪ್ಪಿದೆ. ಹೀಗಾಗಿ ಸ್ವಲ್ಪ ಎಚ್ಚರ ತಪ್ಪಿದರೂ ಮಗುವಿನ ಜೀವಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ಈ ಪುಟ್ಟ ಕಂದಮ್ಮ ಚಕ್ಕುಲಿ ತಿನ್ನುವಾಗ ಗಂಟಲಲ್ಲಿ ಸಿಲುಕಿ ಮಗು ಮೃತಪಟ್ಟಿದೆ.
ಇಡ್ಯಾ ಮನೆ ನಿವಾಸಿ ವಿಠಲ ಅವರ ಒಂದು ವರ್ಷದ ಪುತ್ರ ಆರುಷ್ ಮೃತ ದುರ್ದೈವಿ. ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.